Bengaluru CityDistrictLatestNewsPolitics

ಹಿರಿಯ‌ ನಾಯಕರಿಗೆ ಇನ್ನಾದರೂ ಬಿಜೆಪಿಯಲ್ಲಿ ಸಿಗಲಿದೆಯಾ ಮನ್ನಣೆ?

ಇಡೀ ದೇಶಾದ್ಯಂತ ಕೇಸರಿ ಪತಾಕೆ ರಾರಾಜಿಸ್ತಿದೆ

ಇಡೀ ದೇಶಾದ್ಯಂತ ಕೇಸರಿ ಪತಾಕೆ ರಾರಾಜಿಸ್ತಿದೆ..ಪ್ರಧಾನಿ ಮೋದಿ ನೇತೃತ್ವದಲ್ಲಿ ಕಮಲ ಪಡೆ ಅರಳುತ್ತಿದೆ..ಆದ್ರೆ ರಾಜ್ಯ ಬಿಜೆಪಿ ಪರಿಸ್ಥಿತಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ..ನಾವಿಕನಿಲ್ಲದ ದೋಣಿ ರೀತಿಯಾಗಿ ರಾಜ್ಯ ಬಿಜೆಪಿ ಪರಿಸ್ಥಿತಿ..೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದೇ, ಕಂಡಿದ್ದು ಅಂದು ಮಕಾಡೆ ಮಲಗಿದ ಬಿಜೆಪಿ ಇಂದಿಗೂ ಚೇತರಿಸಿಕೊಂಡಿಲ್ಲ.. ರಾಜ್ಯ ಬಿಜೆಪಿ ಪರಿಸ್ಥಿತಿ ಎಷ್ಟರ ಮಟ್ಟಿಗೆ ಹೀನಾಯ ಆಗ್ಬಿಟ್ಟಿದೆ ಅಂದ್ರೆ ಪಕ್ಷದ ಸಾರಥ್ಯವನ್ನು ವಹಿಸಿಕೊಳ್ಳೋ ರಾಜ್ಯಾಧ್ಯಕ್ಷರ ಆಯ್ಕೆ ಇನ್ನೂ ಕಗ್ಗಂಟಾಗಿದೆ. ಇನ್ನೊಂದೆಡೆ ವಿರೋಧ ಪಕ್ಷದ ನಾಯಕನನ್ನೂ ಆಯ್ಕೆ ಮಾಡೋದಕ್ಕೆ ಆಗದೆ ಇರುವಂಥಹ ಅನಿವಾರ್ಯತೆಯಲ್ಲಿ ಸಿಲುಕಿ ಒದ್ದಾಡ್ತಿದೆ ರಾಜ್ಯ ಕಮಲ ಪಾಳಯ

ರಾಜ್ಯದ ಬಿಜೆಪಿಯಲ್ಲಿರೋ ಕಾಣದ ಕೈಗಳು ಚುನಾವಣೆ ಸಮಯದಲ್ಲಿ ಮಾಡಿದ ಹಲವು ಎಡವಟ್ಟುಗಳು, ಚುನಾವಣೆ ಟೈಮ್ನಲ್ಲಿ ಮಾಡಿದ ಕೆಲ ಪ್ರಯೋಗಗಳೇ ಇವತ್ತು ಬಿಜೆಪಿಗೆ ಮಗ್ಗಲು ಮುಳ್ಳಾಗಿದೆ..ಅಲ್ಲಿಂದಾನೆ ನೋಡಿ, ಬಿಜೆಪಿಯ ಸೋಲಿನ ಕೌಂಟ್ಡೌನ್ ಸ್ಟಾರ್ಟ್ ಆಗಿದ್ದು, ಇನ್ನು ಎಲೆಕ್ಷನ್ ಟೈಮ್ನಲ್ಲಂತೂ, ಇಲ್ಲದೇ ಇರೋ ಹೊಸ, ಹೊಸ ಪ್ರಯೋಗಗಳಿಗೆ ಕೈ ಹಾಕ್ತು ಬಿಜೆಪಿ..ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಯ್ತ..ಅದ್ರಲ್ಲೂ ಹಿರಿಯ ಲಿಂಗಾಯತ ನಾಯಕ ವಿ.ಸೋಮಣ್ಣ, ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯವ್ರನ್ನು ಚುನಾವಣೆಯಲ್ಲಿ ಗೌರವಯುತವಾಗಿ ನಡೆಸಿಕೊಂಡಿರಲಿಲ್ಲ.

ಶೆಟ್ಟರ್ ಹಾಗೂ ಸವದಿಯವ್ರಿಗಂತೂ ಟಿಕೆಟ್ ಕೂಡ ನೀಡದೆ ಅವ್ರನ್ನು ತುಂಬಾ ಕೀಳುಮಟ್ಟದಲ್ಲಿ ನಡೆಸಿಕೊಳ್ಳಲಾಯ್ತು..ಇದ್ರಿಂದ ಸಿಡಿದೆದ್ದ ಶೆಟ್ಟರ್ ಹಾಗೂ ಸವದಿ ಬಿಜೆಪಿ ಪಕ್ಷವನ್ನೇ ತೊರೆದ್ರು..ಹಿರಿಯ, ಅನುಭವಿ ನಾಯಕರನ್ನು ಲೆಕ್ಕಕ್ಕೂ ತೆಗೆದುಕೊಳ್ಳದೇ, ಹೊಸ ಮುಖಗಳಿಗೆ ಮಣೆ ಹಾಕಿದ್ರು..ಅಷ್ಟೇ ಅಲ್ಲ ಹಿರಿಯ ನಾಯಕರ ಕೈನಲ್ಲಿ ಬಲವಂತವಾಗಿ ರಾಜೀನಾಮೆ ಕೂಡ ಕೊಡಿಸಿಕೊಳ್ಳಲಾಯ್ತು..ಹಿರಿಯ ನಾಯಕರಾದ ಈಶ್ವರಪ್ಪನವ್ರಿಗೆ ಟಿಕೆಟ್ ನೀಡದೆ ಇದ್ರೂ ಅವ್ರ ಪುತ್ರ ಕಾಂತೇಶ್ಗೆ ಟಿಕೆಟ್ ನೀಡಲಾಗುತ್ತೆ ಅಂತ ಅಂದುಕೊಳ್ಳಲಾಗಿತ್ತು..ಆದ್ರೆ ಆ ನಿರೀಕ್ಷೆ ಕೂಡ ಹುಸಿಯಾಯ್ತು….ಇನ್ನು ಪಕ್ಷದ ಹಿರಿಯ ನಾಯಕರಾದ ವಿ.ಸೋಮಣ್ಣ ತಮ್ಮ ಸ್ವಕ್ಷೇತ್ರ ಗೋವಿಂದರಾಜ ನಗರಕ್ಕೆ ಟಿಕೆಟ್ ನೀಡಿ ಅಂತ ಬಹುವಾಗಿ ವಿನಂತಿಸಿಕೊಂಡ್ರೂ, ಅದಕ್ಕೂ ಡೋಂಟ್ ಕೇರ್ ಎಂದ ಬಿಜೆಪಿ ನಾಯಕರು ಅವ್ರಿಗೆ ಗೆಲ್ಲಲು ಕಷ್ಟವಾದ ಕ್ಷೇತ್ರಗಳಲ್ಲಿಯೇ ಸ್ಪರ್ಧಿಸುವಂತೆ ಹೇಳಿದ್ರು.

ಪರಿಣಾಮ ಎರಡೂ ಕ್ಷೇತ್ರಗಳಲ್ಲೂ ಹೀನಾಯ ಸೋಲು ಅನುಭವಿಸಿದ್ರು ವಿ.ಸೋಮಣ್ಣ..ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಾಗೂ ವಿಜಯೇಂದ್ರ ನಡುವೆ ನಡೆದ ಒಳ ಒಪ್ಪಂದದ ಪರಿಣಾಮದಿಂದ, ಸೋಮಣ್ಣ ಸೋತ್ರು ಅಂತ ಹೇಳಲಾಗುತ್ತೆ.. ಸ್ವಪಕ್ಷದವ್ರ ಷಡ್ಯಂತ್ರದಿಂದಲೇ ಸೋಮಣ್ಣ ಸೋಲಿನ ಸುಳಿಯಲ್ಲಿ ಸಿಲುಕಿದ್ರು ಎಂಬ ಮಾತುಗಳು ಕೇಳಿಬಂದಿತ್ತು…ಬಿಜೆಪಿ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದ ವಿ.ಸೋಮಣ್ಣ, ತಮ್ಮ ಕಾಯಾ, ವಾಚಾ,ಮನಸಾ,ತಮ್ಮ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ..ಸೋಮಣ್ಣ ವಸತಿ ಇಲಾಖೆಯಲ್ಲಿದ್ದಾಗ ಮಹತ್ತರ ಕೊಡುಗೆಗಳು ಕರ್ನಾಟಕಕ್ಕೆ ದೊರೆತಿವೆ..ಕಲಬುರಗಿ ವಿಮಾನ ನಿಲ್ದಾಣ, ಬೀದರ್ ಸಿವಿಲ್ ಎನ್ಕ್ಲೇವ್, ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಯಾಗಿದೆ..ಹಾಗೆ ವಿಜಯಪುರ, ಹಾಸನ, ರಾಯಚೂರು ವಿಮಾನ ನಿಲ್ದಾಣ ಅಭಿವೃದ್ಧಿ ಕಾಮಗಾರಿ ನಡೆದಿದೆ.

ಹಾಗೆ ಕಾರವಾರ ಸಿವಿಲ್ ಎನ್ಕ್ಲೇವ್, ಕೊಪ್ಪಳ ಮತ್ತು ದಾವಣಗೆರೆ ವಿಮಾನ ನಿಲ್ದಾಣ, ಹೆಲಿಪೋರ್ಟ್, ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್, ತದಡಿ ಪರಿಸರ ಪ್ರವಾಸೋದ್ಯಮ ಯೋಜನೆ, 87,081 ಮನೆಗಳ ಸಾಲದ ಬಡ್ಡಿ ವಿನಾಯಿತಿಯಂತ ಮಹತ್ತರ ಕ್ರಮ ಕೈಗೊಂಡಿದ್ರು ಸೋಮಣ್ಣ..ಸಾವಿರಾರು ಕುಟುಂಬಗಳಿಗೆ ಇದ್ರಿಂದ ಪ್ರಯೋಜನವಾಗಿತ್ತು.. ಅಲೆಮಾರಿ ವರ್ಗದವರಿಗೆ 69,000 ಮನೆಗಳ ಭಾಗ್ಯವನ್ನು ನೀಡಿದ್ದಾರೆ ವಿ.ಸೋಮಣ್ಣ..ಹೀಗಾಗಿ ಅವ್ರನ್ನು ಅಭಿವೃದ್ಧಿ ಹರಿಕಾರ ಅಂತಾನೆ ಜನ ಶ್ಲಾಘಿಸ್ತಿದ್ರು..ಇನ್ನು ಅವ್ರ ಕ್ಷೇತ್ರದ ಪಾಲಿನ ಜನರಿಗಂತೂ ಅವ್ರೇ ಸಾರಥಿಯಾಗಿದ್ರು..ಇನ್ನು ಕೋವಿಡ್ ಸಮಯದಲ್ಲಂತೂ ಗೋವಿಂದರಾಜ ನಗರದ ಕ್ಷೇತ್ರದ ಜನರಿಗಂತೂ ಆಪದ್ಬಾಂಧವನ ರೂಪದಲ್ಲಿ ಬಂದ ಸೋಮಣ್ಣ, ಎಲ್ಲ ಮನೆ,ಮನೆಗೂ, ರೇಶನ್ ಕಿಟ್, ಹೆಲ್ತ್ ಕಿಟ್ ಹಂಚಿಕೆ ಮಾಡಿದ್ರು.

ಕೊಡಗು ಉಸ್ತುವಾರಿಯನ್ನು ಸರ್ಕಾರ ಸೋಮಣ್ಣ ಹೆಗಲಿಗೆ ನೀಡಿದಾಗ ಅದನ್ನು ಚಾಚು ತಪ್ಪದೇ ನಿಭಾಯಿಸಿದ್ದಾರೆ..ಕೊಡಗು ಪ್ರವಾಹದ ಸಮಯದಲ್ಲಿ ತಾವೇ ಖುದ್ದು ನಿಂತು ಸಮರ್ಥವಾಗಿ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ..ಇಂತಹ ಹಿರಿಯ ನಾಯಕರನ್ನು ರಾಜ್ಯ ಬಿಜೆಪಿ ಕಡೆಗಣಿಸಿದೆ..ರಾಜ್ಯದಲ್ಲೇ ಇರೋ ಘಟಾನುಘಟಿ ನಾಯಕರ ಆಟಕ್ಕೆ ಬಿಜೆಪಿಯ ನಿಷ್ಠಾವಂತ ನಾಯಕರು ಬಲಿಪಶುಗಳಾದ್ರು..ವಿಧಾನಸಭಾ ಚುನಾವಣೆಯಲ್ಲಿ ಆದ ತಪ್ಪುಗಳು ಲೋಕಸಭೆ ಚುನಾವಣೆ ಮೇಲೂ ಪರಿಣಾಮ ಬೀರುತ್ತೆ.

ಇನ್ನಾದ್ರೂ ಸೋಮಣ್ಣ, ಈಶ್ವರಪ್ಪನಂಥ ಹಿರಿಯ ನಾಯಕರಿಗೆ, ಪಕ್ಷನಿಷ್ಟೆ ಮೆರೆದ ಲೀಡರ್ಸ್ಗೆ ಮಣೆ ಹಾಕಿದ್ರೆ ಬಿಜೆಪಿ ಗೆಲುವಿನ ಮುಖ ಕಾಣಬಹುದು..ಇಲ್ಲ ಅಂದ್ರೆ ವಿಧಾನಸಭಾ ಚುನಾವಣೆಯಲ್ಲಿ ಯಾವ್ ರೀತಿ ಪರಿಸ್ಥಿತಿ ಎದುರಾಯ್ತಲ್ಲ, ಅದೇ ಪರಿಸ್ಥಿತಿ ಮರುಕಳಿಸಿದ್ರೂ ಅಚ್ಚರಿ ಇಲ್ಲ

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial