ಚಂದ್ರಯಾನ 3: ಚಂದ್ರನ ಮೇಲೆ ಶಾಶ್ವತ ನಿದ್ರೆಗೆ ಜಾರಿದ ವಿಕ್ರಂ, ಪ್ರಜ್ಞಾನ್..!

ಬೆಂಗಳೂರು: ಇಸ್ರೋ ಸಂಸ್ಥೆ ಚಂದ್ರನ ದಕ್ಷಿಣ ಧ್ರುವದ ಅಧ್ಯಯನಕ್ಕೆ ಉಡಾಯಿಸಿದ್ದ ‘ಚಂದ್ರಯಾನ-3’ ಲ್ಯಾಂಡರ್ ಹಾಗೂ ರೋವರ್ ಕಥೆ ಮುಗಿದಿದೆ. ಹೌದು ವಿಕ್ರಂ ಪ್ರಜ್ಞಾನ್ ಚಂದ್ರನ ಮೇಲೆ ಶಾಶ್ವತ ನಿದ್ರೆಗೆ ಜಾರಿದೆ. ಭಾರತದ ಇಸ್ರೋ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸಿತ್ತು. ಬಳಿಕ ಸುಮಾರು 14 ದಿನಗಳ ಕಾಲ ಭಾರತದ ಇಸ್ರೋ ಸಂಸ್ಥೆ ನಿರ್ಮಿಸಿದ್ದ ಲ್ಯಾಂಡರ್ ಹಾಗೂ ರೋವರ್ ಒಟ್ಟಾಗಿ ಕೆಲಸ ಮಾಡಿದ್ದವು.
ಸುಮಾರು 10-11 ದಿನಗಳ ಹಿಂದೆ ಚಂದ್ರನ ಮೇಲೆ ಸೂರ್ಯ ಉದಯಿಸಲು ಶುರು ಮಾಡಿದ್ದ. ಆಗ ಚಂದ್ರನ ದಕ್ಷಿಣ ಧ್ರುವದಲ್ಲಿ ಮೈಕೊರೆಯುವ ಚಳಿಯಲ್ಲಿ ಗಾಢ ನಿದ್ದೆಗೆ ಜಾರಿದ್ದ, ಭಾರತದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್‌ನ ಮತ್ತೆ ಅಧ್ಯಯನಕ್ಕೆ ಸಜ್ಜುಗೊಳಿಸುವ ಪ್ರಯತ್ನ ನಡೆದಿತ್ತು. ಆದರೆ ಮೊದಲ ಪ್ರಯತ್ನದಲ್ಲಿ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಇಸ್ರೋ ಸಂಸ್ಥೆ ಕಳೆದ 10 ದಿನದಿಂದ ನಿರಂತರವಾಗಿ ಈ ಪ್ರಯತ್ನ ನಡೆಸುತ್ತಲೇ ಬಂದಿದೆ. ಆದರೆ ಈಗಿನ ಪರಿಸ್ಥಿತಿ ನೋಡಿದ್ರೆ ಮತ್ತೆ ರೋವರ್ ಹಾಗೂ ಲ್ಯಾಂಡರ್ ನಿದ್ದೆಯಿಂದ ಏಳುವುದು ಅನುಮಾನ ಎಂದು ಹೇಳಲಾಗುತ್ತಿದೆ