ಹಾವೇರಿ: ತೆಗ್ಗು-ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಜನರು ಎಮ್ಮೆಗಳಿಗೆ ಸ್ನಾನ ಮಾಡಿಸಿದ ಘಟನೆ ವಿಶ್ವ ಪ್ರಸಿದ್ದ ಬ್ಯಾಡಗಿಯಲ್ಲಿ ನಡೆದಿದೆ.
ಕಳೆದ ಹಲವಾರು ವರ್ಷಗಳಿಂದ ಬ್ಯಾಡಗಿಯಲ್ಲಿ ಮುಖ್ಯರಸ್ತೆ ಅಗಲೀಕರಣಕ್ಕೆ ಹೋರಾಟ ನಡೆಯುತ್ತಿದೆ.ಇದ್ದ ರಸ್ತೆಯಲ್ಲಿ ಸಾವಿರಾರು ತೆಗ್ಗು – ಗುಂಡಿಗಳು ಬಿದ್ದಿವೆ.ತಗ್ಗು ಗುಂಡಿಗಳಲ್ಲಿ ಅಡಿ ಎತ್ತರದಲ್ಲಿ ನೀರು ನಿಂತಿದೆ. ಇದೇ ನೀರಲ್ಲಿ ಈಗ ಜನರು ಎಮ್ಮೆ ಮೈ ತೊಳೆದು ಅಣುಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿನ ನೀರಲ್ಲಿ ಎಮ್ಮೆ ಮೈ ತೊಳೆದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ರಸ್ತೆ ಕಾಮಗಾರಿ ಆಗಿಲ್ಲ. ಎಮ್ಮೆ ಮೈ ತೊಳೆಯುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.ರಸ್ತೆ ರೀಪೆರಿ ಮತ್ತು ಅಗಲಿಕರಣಕ್ಕೆ ಒತ್ತಾಯಿಸಿ ವಿಭಿನ ಪ್ರತಿಭಟನೆ ನಡೆಸಲಾಗಿದೆ.