
ಹಾನಗಲ್: ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿಜಯಕುಮಾರ್ ದೊಡ್ಡಮನಿ ಅವರಿಗೆ ಮಹಮ್ಮದ್ ಗೌಸ್ ಖಾಲೆನವರ್ ಅವರು ಸನ್ಮಾನ ಮಾಡಿದರು.
ತಾಲೂಕ ಪಂಚಾಯಿತಿ ಆವರಣದಲ್ಲಿ ತೆರೆಯಲಾಗಿರುವ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಕಚೇರಿಯಲ್ಲಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಗ್ಯಾರಂಟಿ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಕ್ಷೇತ್ರದ ಜನರಿಗೆ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಐದು ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಇರ್ಫಾನ್ ಮಿಟಾಯಿಗರ, ಪುರಸಭೆ ಸದಸ್ಯರಾದ ಪರಶುರಾಮ್ ಖಡುನವರ, ಸುರೇಶ್ ನಾಗಣ್ಣವರ,ಆಶ್ರಯ ಸಮಿತಿಯ ಸದಸ್ಯ ಮಾಲ್ತೇಶ್ ಕಾಳೆರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ, ಪ್ರದೀಪ್ ಹರಿಜನ ಕಾಂಗ್ರೆಸ್ ಯುವ ಮುಖಂಡರಾದ ಶಿವು ಭದ್ರಾವತಿ, ಅಶೋಕ್ ಜಾದವ್, ಮಕ್ಬುಲ್ ಬಡಗಿ, ರಾಘವೇಂದ್ರ ಹಾನಗಲ್, ಚಂದ್ರು ಸೂಣನಕೊಪ್ಪ, ಮಂಜು ಶೃಂಗೇರಿ, ಬಸಣ್ಣ ವಾಲಿಕರ್, ರಾಮಚಂದ್ರ ಓಲೆಕಾರ್, ಪ್ರಕಾಶ್ ಆರೇರ್, ಪರಶುರಾಮ್ ಚಿಕ್ಕಣಗಿ, ಸೇರಿದಂತೆ ಮುಂತಾದವರು ಹಾಜರಿದ್ದರು.