ಬ್ಯಾಡಗಿ: ಮಕ್ಕಳ ಪ್ರತಿಭೆಯನ್ನು ಗುರುತಿಸಲು, ಸ್ಪರ್ದಾ ಮನೋಭಾವ ಬೆಳೆಸಲು ಹಾಗೂ ಮುಗ್ಧಮಕ್ಕಳ ವರ್ಣರಂಜೀತ ಕನಸುಗಳನ್ನು ಬಿತ್ತರಿಸಲು ಚಿತ್ರಸಂತೆಯನ್ನು ಆಯೋಜನೆ ಮಾಡಲಾಗಿದೆ.
ಬ್ಯಾಡಗಿ ತಾಲೂಕ ಮುದ್ರಣಕಾರರ ಸಂಘ (ರಿ) ಬ್ಯಾಡಗಿ ರೋಟರಿ ಕ್ಲಬ್ ಆಶ್ರಯದಲ್ಲಿ ಮಕ್ಕಳಿಗಾಗಿ ಹಾವೇರಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ದಿ. 28 ಬೆಳಿಗ್ಗೆ 9.30 ಗಂಟೆಗೆ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪ ಆಯೋಜನೆ ಮಾಡಲಾಗಿದೆ.
ಎರಡು ವಿಭಾಗದಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದ್ದು, ಕಿರಿಯರ (1 ರಿಂದ 6 ನೇ ತರಗತಿ) ವಿಭಾಗದಲ್ಲಿ ನಿಸರ್ಗ ಹಿರಿಯರ ವಿಷಯದಲ್ಲಿ ಸ್ಪರ್ಧೆ ನಡೆಯಲಿದೆ. ಹಿರಿಯರ ವಿಭಾಗದ (7 ರಿಂದ 10 ನೇ ತರಗತಿ)ನಿಮ್ಮ ಭವಿಷ್ಯದ ಕನಸು ಎಂಬ ವಿಷಯದಲ್ಲಿ ಸ್ಪರ್ಧೆ ನಡೆಯಲಿದೆ.
ಎರಡು ವಿಭಾಗದಲ್ಲಿ ಬಹುಮಾನ ನಿಗದಿ ಮಾಡಲಾಗಿದ್ದು, ಪ್ರಥಮ 5001 ರೂ, ದ್ವಿತೀಯ 3001 ರೂ, ತೃತೀಯ 2001 ರೂ ಗಳ ನೀಡಲಾಗುತ್ತಿದೆ. ಇನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಚಿತ್ರ ಬಿಡಿಸಲು ಡ್ರಾಯಿಂಗ್ ಶೀಟ್ ಮಾತ್ರ ನೀಡಲಾಗುವುದು, ಚಿತ್ರಕ್ಕೆ ಬೇಕಾಗಿರುವ ಬಣ್ಣ ಮತ್ತು ಇತ್ಯಾದಿ ಸಾಮಗ್ರಿಗಳನ್ನು ವಿದ್ಯಾರ್ಥಿಗಳೇ ತರಬೇಕು.
ಭಾಗವಹಿಸುವ ಮಕ್ಕಳು ಅರ್ಜಿಗಳನ್ನು ಪ್ರವೇಶ ಅರ್ಜಿ ದೊರೆಯುವ ಸ್ಥಳಗಳು ಪೋಸ್ಟ್ ರಸ್ತೆಗ ಕಣ್ಣೂರ ಪ್ರಿಂಟರ್ಸ, ಬಸವೇಶ್ವರ ನಗರದ ಗಣೇಶ ಆಫ್‌ಸೆಟ್ ಪ್ರಿಂಟರ್ಸ, ಬ್ಯಾಡಗಿ ಓಂ ಕಮ್ಯೂನಿಕೇಶನ್ ವಾಟರ್ ಪಂಪ್‌ಹೌಸ್ ಎದುರು, ಹಂಸಭಾವಿ ರಸ್ತೆ, ಬ್ಯಾಡಗಿ ಅರ್ಜಿ ಪಡೆದು ಭರ್ತಿಮಾಡಿ, ಶಾಲಾ ಮುಖ್ಯೋಪಾಧ್ಯಾಯರ ಸಹಿ/ಸೀಲಿನೊಂದಿಗೆ ಸ್ಪರ್ಧಾ ಸ್ಥಳಕ್ಕೆ ತರಬೇಕು.ಹೆಚ್ಚಿನ ಮಾಹಿತಿಗಾಗಿ 9242118069, 9480461444 9972624407, 9964110503 ಸಂಪರ್ಕಿಸಲು ಕೋರಿದೆ.