ಹಾನಗಲ್ಲ : ತಾಲೂಕಿನ ರಸ್ತೆ ಸುಧಾರಣೆಯ ಹೊಣೆ ಹೊತ್ತ ಜಿಲ್ಲಾ ಪಂಚಾಯತಿ ಕಚೇರಿಗೆ
ದಾರಿ ಇಲ್ಲದಂತಾಗಿದೆ. ರಸ್ತೆಯಲ್ಲಿ ನೀರು ನಿಂತು ವಾಹನ, ಪಾದಚಾರಿಗಳು ಜಿಲ್ಲಾ
ಪಂಚಾಯತ ಕಚೇರಿಗೆ ಹೋಗಲಾರದಷ್ಟು ನೀರು ನಿಂತಿದ್ದರೂ ಅಧಿಕಾರಿಗಳು ಮಾತ್ರ
ಜಾಣಮೌನಕ್ಕೆ ಶರಣಾಗಿದ್ದಾರೆ.
ಹಾನಗಲ್ಲ ಪಟ್ಟಣದ ಕಚೇರಿಗಳ ಸಮುಚ್ಚಯವೇ ಎನ್ನ ಬಹುದಾದ ಪ್ರದೇಶದಲ್ಲಿ ಜಿಲ್ಲಾ
ಪಂಚಾಯತ ಕಚೇರಿ ಇದೆ. ನಿತ್ಯ ಅಧಿಕಾರಿಗಳು ಗುತ್ತಿಗೆದಾರರು, ಸಾರ್ವಜನಿಕರು ನಿರಂತರ
ಸಂಪರ್ಕದಲ್ಲಿರಬೇಕಾದ ಕಚೇರಿ ಇದಾಗಿದ್ದರೂ ಇದಕ್ಕಿರುವ ದಾರಿಯನ್ನು ಸರಿಪಡಿಸಿಕೊಳ್ಳಲು
ಸಾಧ್ಯವಾಗಿಲ್ಲ. ಇದು ಈ ವರ್ಷದ ಮಳೆಯ ಸಮಸ್ಯೆಯಲ್ಲ. ಹಲವು ವರ್ಷಗಳಿಂದ ಮಳೆ
ಬಂತೆಂದರೆ ಈ ತಗ್ಗಿನಲ್ಲಿ ನೀರು ನಿಂತು ಸಂಚರಿಸುವವರು ಆತಂಕಕ್ಕೊಳಗಾಗಬೇಕಾಗಿದೆ. ಕೃಷಿ
ಇಲಾಖೆಯವರೆಗೆ ಹರಸಾಹಸಮಾಡಿ ತಲುಪಬಹುದು. ಅದರ ಮುಂದಿರುವ ಜಿಲ್ಲಾ
ಪಂಚಾಯತ ಕಚೇರಿಗೆ ಹೋಗುವ ರಸ್ತೆಯ ದೊಡ್ಡ ತಗ್ಗು ಕಚೇರಿ ಪ್ರವೇಶದ ಕಾಂಪೋಂಡ್
ಪಕ್ಕದಲ್ಲಿಯೇ ನೀರು ನಿಂತು ಕಚೇರಿಗೆ ಬರುವವರನ್ನು ತಡೆದು ನಿಲ್ಲಿಸುತ್ತದೆ. ಅಧಿಕಾರಿಗಳು
ಗುತ್ತಿಗೆದಾರರು ಈ ರಸ್ತೆಯಲ್ಲಿಯೇ ಹರಸಾಹಸ ಮಾಡಿ ಇಲಾಖೆ ಮುಟ್ಟುತ್ತಾರೆ. ಇದರ
ಪಕ್ಕದಲ್ಲಿಯೇ ಇರುವ ಸಾರ್ವಜನಿಕರ ಮನೆಗಳಿಗೂ ದಾರಿ ಇಲ್ಲದಂತಾಗಿದೆ. ತಾಲೂಕಿನ
ರಸ್ತೆಗಳನ್ನು ಸುರಕ್ಷಿತವಾಗಿಡುವ ಜಿಲ್ಲಾ ಪಂಚಾಯತ ಕಚೇರಿಗೆ ದಾರಿ ಇಲ್ಲ ಎಂದರೆ ಹೇಗೆ.
ಇದು ಪರಸಭೆಯ ವ್ಯಾಪ್ತಿಯ ರಸ್ತೆಯಾಗಿದೆ. ಅವರೇ ಈ ರಸ್ತೆ ದುರಸ್ತಿ ಮಾಡಬೇಕು. ಈ
ರಸ್ತೆಯನ್ನು ನಾವು ರಿಪೇರಿ ಮಾಡಲು ಬರುವುದಿಲ್ಲ. ಎಂದು ಜಿಪಂ ಅಧಿಕಾರಿಗಳು ಸಬೂಬು
ಹೇಳುತ್ತಾರೆ.
ಲೋಕೋಪಯೋಗಿ ಇಲಾಖೆಯಿಂದ ಮುಂದೆ ಹೋಗುವ ನವನಗರ, ತೋಟಗಾರಿಕ
ಇಲಾಖೆ, ಕೃಷಿ ಇಲಾಖೆ ಸರಕಾರಿ ವಸತಿ ಸಮುಚ್ಚಯ ಸೇರಿದಂತೆ ವಿವಿಧ ವಿದ್ಯಾರ್ಥಿ
ನಿಲಯಗಳಿಗೆ ಹೋಗುವ ಈ ರಸ್ತೆ ಬಗೆಗೆ ಅಧಿಕಾರಿಗಳು ನಿರ್ಲಕ್ಷ ಧೋರಣೆ ತಳೆದಿರುವುದು
ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಅಧಿಕಾರಿಗಳು
ಬಹುತೇಕ ಸಾರ್ವಜನಿಕರಿಗೆ ಇದು ಪ್ರಮುಖ ರಸ್ತೆಯಾಗಿದ್ದು, ಇದರ ನಿರ್ವಹಣೆ ಮಾತ್ರ
ಸಾರ್ವಜನಿಕರಲ್ಲಿ ಬೇಸರ ಉಂಟುಮಾಡಿದೆ.
ರಸ್ತೆ ಹದಗೆಟ್ಟು ಜಿಪಂ ಕಚೇರಿಗೆ ಹೋಗಲು ಸಮಸ್ಯೆಯಾಗಿರುವುದು ಗಮನಕ್ಕೆ
ಬಂದಿದೆ.
ಕೋಟ್
ರಸ್ತೆ ಹದಗೆಟ್ಟು ಜಿಲ್ಲಾ ಪಂಚಾಯತ್ ಕಚೇರಿಗೆ ಹೋಗಲು ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ
ತಕ್ಷಣ ಅಭಿಯಂತರರನ್ನು ಕರೆದುಕೊಂಡು ಸ್ಥಳ ಪರಿಶೀಲಿಸಿ ಶೀಘ್ರ ದುರಸ್ತಿ ಮಾಡಲಾಗುವುದು.
.ವೈ.ಕೆ.ಜಗದೀಶ, ಪುರಸಭೆ ಮುಖ್ಯಾಧಿಕಾರಿಗಳು,