ಸವಣೂರು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ನಿರಂತರ ಅವಾಂತರ ಹೆಚ್ಚುತ್ತಿವೆ. ರಾತ್ರಿ ಇಡಿ ಸುರಿದ ಮಳೆಗೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆಯ ಮಾಳಿಗೆ ಕುಸಿದು, ಸ್ಥಳದಲ್ಲಿ ಅವಳಿ ಮಕ್ಕಳು ಹಾಗೂ ಓರ್ವ ಮಹಿಳೆ ಮೃತ ಪಟ್ಟಿದ್ದರು.
ಈ ಕುಟುಂಬವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಶಿಗ್ಗಾವಿ- ಸವಣೂರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಂಜೀವಕುಮಾರ ನೀರಲಗಿ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಸಾಂತ್ವನ ಹೇಳಿ, ಧನ ಸಹಾಯ ಮಾಡಿದರು.
ಬಳಿಕ ಮೃತರ ಕುಟುಂಬಕ್ಕೆ ನಮ್ಮ ಸರ್ಕಾರ ಸ್ಪಂದಿಸುತ್ತದೆ. ರಾಜ್ಯಾದ್ಯಂತ ತುಂಬಾ ಮಳೆಯಾಗುತ್ತಿದ್ದು ಸರ್ಕಾರ ಮುಂಜಾಗ್ರತವಾಗಿ ಏನು ಕೆಲಸ ಮಾಡಬೇಕು ಅದನ್ನು ಮಾಡಿದೆ ಹಾಗಾಗಿ ಯಾವತ್ತು ನಾವು ಬಡವರ ಪರವಾಗಿದ್ದೇವೆ.
ನಿಮ್ಮ ಕುಟುಂಬಕ್ಕೆ ಎಲ್ಲ ರೀತಿಯ ನೇರವು ನೀಡಲು ನಾವು ಸಿದ್ದರಿದ್ದೇವೆ ಧೈರ್ಯ ತುಂಬಿದರು. ಈ ಸಮಯದಲ್ಲಿ ಸವಣೂರು ತಾಲೂಕ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ಮುಲ್ಲಾ ಸೇರಿದಂತೆ ಮುಂತಾದವರು ಹಾಜರಿದ್ದರು.