ಹಾನಗಲ್: ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಶನಿವಾರ ರಂದು ಯುವಕನೋರ್ವ ನೇಣು
ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಹನುಮಂತಪ್ಪ ಕೆರಿಮತ್ತಿಹಳ್ಳಿ (೨೪) ಆತ್ಮಹತ್ಯೆ ಮಾಡಿಕೊಂಡ ಯುವಕ. ಕುಡಿತದ ಚಟಕ್ಕೆ ಬಿದ್ದು ಯಾವುದೋ ವಿಷಯವನ್ನ ಮನಸ್ಸಿಗೆ ಹಚ್ಚಿಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು
ತಿಳಿದು ಬಂದಿದೆ. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.