ಸವಣೂರು: ತಾಲೂಕಿನ ಹತ್ತಿಮತ್ತೂರ ತಾಂಡಾ ಮತ್ತು ಹತ್ತಿಮತ್ತೂರ ಮುಲ್ಲಾನ ಪ್ಲಾಟ್ ಮಧ್ಯೆ ಇರುವ ಮೈಲಾಲಿಂಗೇಶ್ವರ ಶಿಬಾರ ಕಟ್ಟಿಯಲ್ಲಿರುವ ಕಲ್ಲಿನ ಶಿವಲಿಂಗ ಮೂರ್ತಿ ಕಳ್ಳತನವಾಗಿದೆ.
ಕಳ್ಳರು ಊರಿನ ಹೊರವಲಯದಲ್ಲಿ ಇದ್ದ ಕಲ್ಲಿನ ಈಶ್ವರ ಮೂರ್ತಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ದೇವೆಂದ್ರಪ್ಪ ಸಕ್ರಪ್ಪ ಲಮಾಣಿ ಸವಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.