ಹಾವೇರಿ : ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರ ಆರೋಪಗಳನ್ನು ಬಂಧಿಸಿ ಸುಮಾರು 2.96 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದಿರುವ ಘಟನೆ ಹಾವೇರಿ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಶಹರ ಪೊಲೀಸರು ನಾಗೇಂದ್ರನಮಟ್ಟಿಯಿಂದ ಶಾಂತಿ ನಗರಕ್ಕೆ ಹೋಗುವ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧಿಸಿದ್ದಾರೆ. ಬಂಧಿತರಿಂದ ನಿಷೇಧಿತ ಮಾದಕ ವಸ್ತು ಗಾಂಜಾ (11 ಕೆ.ಜಿ 843 ಗ್ರಾಂ ಅಂದಾಜು 2,96,075-00 ರೂ ಮೌಲ್ಯದ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.ಬಂಧಿತರನ್ನು ಸವಣೂರಿನ ಗುಲಾಮರಸೂಲಖಾನ ಹಸನಖಾನ ಖಾಂಜಾದ, ಮಲಿಕ ರೆಹಾನ,ರಿಯಾಜ್ ಅಹ್ಮದ ಬಕ್ರಿಯಾವಾಲೆ, ಪುರಖಾನ ಬಾಬಾಜಾನ ಪಟವೆಗಾರ ಎಂದು ಗುರುತಿಸಲಾಗಿದೆ.ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.