CrimeDistrictHaveriLatest

ವಿವಿಧ ವ್ಯಕ್ತಿಗಳು ಕಾಣೆ

ಹಾವೇರಿ: ಹಾವೇರಿ ತಾಲೂಕಿನ ವಿವಿಧ ಗ್ರಾಮಗಳಿಂದ ಮೂವರು ಪುರುಷರು ಹಾಗೂ ಓರ್ವ ಯುವತಿ ಕಾಣೆಯಾಗಿರುವುದಾಗಿ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.ನಾಗನೂರ ಗ್ರಾಮದ 62 ವರ್ಷದ ಗದಿಗೆಪ್ಪ ದಾಸಣ್ಣನವರ 7 ಮೇ 2024 ರಂದು, ಗೌರಾಪೂರ ಗ್ರಾಮದ 40 ವರ್ಷದ ಗುತ್ತೆಪ್ಪ ಯಲ್ಲಪ್ಪ ಹೆಡಿಗೊಂಡ 6 ಜೂನ್ 2024 ರಂದು, ಕುಳೇನೂರ ಗ್ರಾಮದ 31 ವರ್ಷದ ಮಲ್ಲಿಕಾರ್ಜುನ ಶಾಂತಪ್ಪ ಬಣಕಾರ 29 ಫೆಬ್ರುವರಿ 2024 ಹಾಗೂ ಮಾಚಾಪೂರ ಗ್ರಾಮದ 18 ವರ್ಷದ ಗಂಗಮ್ಮ ಫಕ್ಕೀರಪ್ಪ ಪೂಜಾರ ಎಂಬ ಯುವತಿ 3 ಜುಲೈ 2024 ರಂದು ಕಾಣಿಯಾಗಿದ್ದು, ಈ ಕಾಣೆಯಾದ ಬಗ್ಗೆ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಹಾವೇರಿ ಗ್ರಾಮೀಣ ಪೊಲೀಸ್ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial