CrimeDharwadHaveriUttara Kannada
ಟ್ರಕ್ ಅಫಘಾತದಲ್ಲಿ ಮೃತ ಪಟ್ಟವರಿಗೆ ಹೆಸ್ಕಾಂ ಅಧ್ಯಕ್ಷರಿಂದ ಕಂಬನಿ, ಕಿಮ್ಸ್ ನಲ್ಲಿ ಗಾಯಗೊಂಡರನ್ನು ಭೇಟಿಯಾದ ಖಾದ್ರಿ

ಹಾವೇರಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪ ಅರಬೈಲ್ ಘಾಟ್ ಹತ್ತಿರ ಟ್ರಕ್ ಪಲ್ಟಿಯಾಗಿ ಭೀಕರ ಅಪಘಾತದಲ್ಲಿ ಹಾವೇರಿ ಜಿಲ್ಲೆಯ ಸವಣೂರ ಪಟ್ಟಣದ 10 ಜನರು ನಿಧನರಾಗಿದ್ದು, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಹಾಗೂ ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತ ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿ ವಿಷಾಧಿಸಿದ್ದಾರೆ.
ಮೃತರು ಹಾಗೂ ಗಾಯಗೊಂಡವರು ತೀವ್ರ ಬಡತನ ಕುಟುಂಬದವರಾಗಿದ್ದು, ಸರಕಾರ ಇವರೆಲ್ಲರಿಗೂ ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡಬೇಕೆಂದು ಈ ಮೂಲಕ ವಿನಂತಿಸುತ್ತೇನೆ.ಈ ಅಪಘಾತದಲ್ಲಿ ನಿಧನರಾದ ಹಾಗೂ ಗಾಯಗೊಂಡಿರುವ ದುಃಖತಪ್ತ ಕುಟುಂಬ ವರ್ಗ ಹಾಗೂ ಬಂಧು ಬಳಗದವರಿಗೆ ಇಂತಹ ಸಂದರ್ಭದಲ್ಲಿ ಹೆಚ್ಚು ಧೈರ್ಯವನ್ನು ನೀಡುವುದರ ಜೊತೆಗೆ ಮೃತರ ಆತ್ಮಕ್ಕೆ ಚಿರ ಶಾಂತಿ ಹಾಗೂ ಗಾಯಗೊಂಡವರು ಬೇಗನೆ ಗುಣಮುಖರಾಗಲೆಂದು ಈ ಮೂಲಕ ಪ್ರಾರ್ಥಿಸಿದ್ದಾರೆ.