ಹಾವೇರಿ: ಬಚ್ಚಲ ಮನೆಯಲ್ಲಿ ಇಟ್ಟಿದ್ದ ನೀರಿನ ಬ್ಯಾರಲ್ ನಲ್ಲಿ ಬಿದ್ದು ಮೂರು ವರ್ಷದ ಮಗು ದಾರುಣವಾಗಿ ಸಾವುಗೊಂಡಿರುವ ಘಟನೆ ಬಂಕಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಆದಿತ್ಯ ಲಮಾಣಿ (3) ನೀರಿನ ಬ್ಯಾರಲ್ ನಲ್ಲಿ ಬಿದ್ದು ಸಾವನ್ನಪ್ಪಿರವ ಮಗುವಾಗಿದ್ದು, ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಂದಾಪುರ ತಾಂಡದಲ್ಲಿ ಈ ನಡೆದ ಘಟನೆ ನಡೆದಿದ್ದು,ಯಲ್ಲಮ್ಮ-ಶಂಖರ ಅವರು ಮನೆಯಲ್ಲಿ ಮಗು ಬಿಟ್ಟು ಹೊಲದ ಕೆಲಸಕ್ಕೆ ಹೋದಾಗ ನಡೆದ ಘಟನೆ ನಡೆದಿದೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.