
ಹಾವೇರಿ: ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಬಂದಿದ್ದ ಮಹಿಳೆ ಸಾವುಗೊಂಡಿರುವ ಘಟನೆ ಹಾವೇರಿಯ ವೀರಾಪುರ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮೆಡಿಸನ್ ಅಡ್ಡ ಪರಿಣಾಮದಿಂದ ಬ್ಯಾಡಗಿ ಪಟ್ಟಣದ ನಿವಾಸಿ ಶಮಿನ ಬಾನು ಅರಳಿಕಟ್ಟಿ (23) ಮಹಿಳೆ ಮೃತ ಪಟ್ಟಿರೋದಾಗಿ ಕುಟುಂಬಸ್ಥರು ಹಾವೇರಿ ನಗರದ ವೀರಾಪುರ ಆಸ್ಪತ್ರೆ ವಿರುದ್ದ ಮಹಿಳೆ ಪೋಷಕರು, ಸಂಬಂಧಿಕರು,ಸ್ನೇಹಿತರ ಆರೋಪಿಸುತ್ತಿದ್ದಾರೆ.ಮೃತ ಮಹಿಳೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಮಹಿಳೆಯನ್ನು ಬ್ಯಾಡಗಿಯಿಂದ ಹಾವೇರಿ ನಗರದ ವೀರಾಪುರ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.ಹಾವೇರಿಯ ವೀರಾಪುರ ಆಸ್ಪತ್ರೆಯಲ್ಲಿ ವೈದ್ಯರು ಓವರ್ ಡೋಸ್ ಇಂಜೆಕ್ಷನ್ ನೀಡಿದ ಹಿನ್ನೆಲೆ ಮಹಿಳೆ ಮೃತ ಪಟ್ಟಿರೋದಾಗಿ ಆರೋಪಿಸಿದ್ದಾರೆ. ಕುಟುಂಬಸ್ಥರಿಂದ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಗಳ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಪೋಷಕರು ದೂರಿದ್ದಾರೆ.ಇಂಜೆಕ್ಷನ್ ನೀಡಿದ ವೈದ್ಯ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಆಸ್ಪತ್ರೆ ಮುಂದೆ ಬೀಗುವಿನ ವಾತಾವರಣ, ಪೊಲೀಸರಿಂದ ಬೀಗಿ ಬಂದೋಬಸ್ತ್ ಮಾಡಲಾಗಿದೆ.