
ಹಾವೇರಿ: ಮೀಸಲು ಅರಣ್ಯ ಪ್ರದೇಶದಲ್ಲಿ ಅನಾಮಿಕರು ಹಂದಿ ಹಿಡಿಯಲು ಇಟ್ಟಿದ್ದ ಸ್ಪೋಟಕ ವಸ್ತು ಸಿಡಿದು ಅರಣ್ಯ ಪ್ರದೇಶಕ್ಕೆ ಮೇಯಲು ಹೋಗಿದ್ದ ಎಮ್ಮೆಯ ಬಾಯಿ ಛಿದ್ರವಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರಾಮತೀರ್ಥ ಹೊಸಕೋಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ದನಗಳು ಮೇಯಿಸಲು ಹೊದಾಗ ನಡೆದ ಘಟನೆ ನಡೆದಿದೆ.ಭಾಷಾಸಾಬ್ ಬಂಕಾಪುರ ರೈತನ ಎಮ್ಮೆಯು ಮೆಯಿತ್ತಿದ್ದ ವೇಳೆ ಸ್ಪೋಟಕವನ್ನು ಕಚ್ಚಿದ ಪರಿಣಾಮ ಎಮ್ಮೆ ಜೀವ ಕಳೆದುಕೊಂಡಿದೆ. ಕೂಡಲೇ ಸಂಬಂದಿಸಿದ ಅಧಿಕಾರಿಗಳು ತಪ್ಪಿತಸ್ಥರನ್ನು ಗುರುತಿಸಿ ಬಡ ರೈತನಿಗೆ ನ್ಯಾಯ ಒದಗಿಸಲು ಗ್ರಾಮಸ್ಥರ ಆಗ್ರಹಿದ್ದಾರೆ.ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.