ಹಾನಗಲ್: ಚಲಿಸುತ್ತಿರುವ ಕಾರು ಪಲ್ಟಿಯಾಗಿ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಿರೂರು ಕ್ರಾಸ್ ಬಳಿ ನಡೆದಿದೆ.KA -02 MU-8328 ನಂಬರ್ ಪ್ಲೆಟ್ ಕಾರಿನಲ್ಲಿ ಚಲಿಸುತ್ತಿದ್ದರು ತಮಿಳುನಾಡು ಮೂಲದ ಈ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಗಾಯಗೊಂಡಿರುವ ವಿದ್ಯಾರ್ಥಿಗಳು ಬೆಂಗಳೂರಿಂದ ಗೋಕರ್ಣಕ್ಕೆ ಟ್ರಿಪ್ ಹೊರಟ್ಟಿದ್ದರು ಎಂದು
ತಿಳಿದು ಬಂದಿದೆ.ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.