ಹಾನಗಲ್: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಹಾಗೂ ಮಾಲ್ ಪೂರೈಕೆ ಮಾಡುತ್ತಿದ್ದ ವ್ಯಕ್ತಿವೋರ್ವನ ಹಾನಗಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಹಾನಗಲ್ ಪೊಲೀಸ್ ಠಾಣೆಯ ಸಿಪಿಐ ಆಂಜನೇಯ ರವರ ಮಾರ್ಗದರ್ಶನ ಪಿಎಸ್‌ಐ ಶರಣಪ್ಪ ಹಂಡ್ರಗಲ್ ರವರ ಸಾರಥ್ಯದಲ್ಲಿ ಆಡೂರ ಠಾಣೆ ಪೊಲೀಸರ ಕಾರ್ಯಾಚರಣೆ ಅಕ್ರಮವಾಗಿ ಗಾಂಜಾ ಮಾರುತ್ತಿದ್ದವರ ಬಂಧಿಸಿದ್ದಾರೆ.
ಬಂಧಿತರಲ್ಲಿ ಕಿರವಾಡಿ ಗ್ರಾಮದವರಾದ ಮಾಲತೇಶ ತಂದೆ ರಾಮಪ್ಪ ಬಳಿಗಾರ (34), ಪರಶುರಾಮ ತಂದೆ ಬಸಪ್ಪ ಗಂಜೀಗಟ್ಟಿ, ಗಾಂಜಾ ಪೂರೈಕೆ ಮಾಡುತ್ತಿದ್ದ ಬ್ಯಾಡಗಿಯ ಖಾದರ್ ಅವರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು ಅಂದಾಜು ರೂ. 1.ಲಕ್ಷ ಮೌಲ್ಯದ, 1 ಕೆಜಿ 500 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ 3-12-2024ರಂದು ಬೆಳಿಗ್ಗೆ, ಹಾನಗಲ್ ತಾಲ್ಲೂಕಿನ ಕಿರವಾಡಿ ಗ್ರಾಮದಲ್ಲಿ, ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ, ಹಾನಗಲ್ ಸರ್ಕಲ್ ಪೊಲೀಸರಿಗೆ ಸಿಗುತ್ತದೆ. ಈ ಮಾಹಿತಿ ಮೇಲೆ, ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು, ದಾಳಿ ಮಾಡಿ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ಎಸ್ಪಿ ಅಂಶುಕುಮಾರ್, ಅಡಿಷನಲ್ ಎಸ್ಪಿ ಲಕ್ಷ್ಮಣ ವೈ. ಶಿರಕೋಳ, ಶಿಗ್ಗಾಂವಿ ಉಪವಿಭಾಗದ ಡಿವೈಎಸ್ಪಿ ಕೆ.ವಿ. ಗುರುಶಾಂತಪ್ಪ ಮತ್ತು ಹಾನಗಲ್ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಎನ್.ಹೆಚ್. ಆಂಜನೇಯ ರವರುಗಳ ಮಾರ್ಗದರ್ಶನ
ಆಡೂರ ಠಾಣೆ ಸಬ್ ಇನ್ಸ್‌ಪೆಕ್ಟರ್ ಶರಣಪ್ಪ ಹಂಡ್ರಗಲ್ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಹಾನಗಲ್ ಪಿಎಸ್‌ಐ ಸಂಪತ್ತ ಆನಿಕಿವಿ ಹಾಗೂ ಸಿಬ್ಬಂದಿಯವರಾದ ಜಾವೇದ ಸಂಶಿ, ಗುತ್ತೆಪ್ಪ ಬಾಸೂರ, ರವಿ ಹರಿಜನ, ಮಾರುತಿ ಹಿತ್ತರ್, ಈರಣ್ಣ ಲಂಗೋಟಿ, ಭೀಮಣ್ಣ ಗೋಡಿಹಾಳ, ಶಂಭು ಸುಳ್ಳಳ್ಳಿ, ಪಿ.ಬಿ. ಹೊಸಮನಿ ಮತ್ತು ವೆಂಕಟೇಶ ಲಮಾಣಿ ಜಾವಿದ್ ಸಂಶಿ ಪಾಲ್ಗೊಂಡಿದ್ದರು.