
ಹಾವೇರಿ: ಸರಕಾರಿ ಹಾಗೂ ಅರೆ ಸರಕಾರ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕ-ಯುವತಿಯರಿಂದ ಹಣ ಹಾಕಿಸಿಕಡೊಂಡ ಟೋಪಿ ಹಾಕುತ್ತಿದ್ದ ಖದೀಮನನ್ನ ಹಾವೇರಿ ಸೆನ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬಂಧಿಸಿದ್ದಾರೆ.
ಸ್ಟಾಪ್ ನರ್ಸ್ ಉದ್ಯೋಗ ಕೊಡಿಸುವದಾಗಿ ನಂಬಿಸಿ ಯುವಕ ಯುವತಿಗೆ ಪಂಗನಾಮ ಹಾಕ್ತಿದ್ದ ಖದೀಮನನ್ನ ಹಾವೇರಿ ಕ್ರೈಂ ಪೊಲೀಸ್ ಹೆಡೆಮುರಿ ಕಟ್ಟಿ ಕಂಬಿ ಹಿಂದೆ ಕಳಿಸಿದ್ದಾರೆ.
ಹಾವೇರಿಯ CEN ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಶಿವಶಂಕರ್ ಗಣಾಚಾರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿ ಸಿದ್ದಪ್ಪನನ್ನ ಬಂಧಿಸಲಾಗಿದೆ. ಇನ್ನು ಆರೋಪಿ ವಿಜಯನಗರ ಜಿಲ್ಲೆಯ ಕೊಡ್ಲಿಗಿ ತಾಲೂಕಿನ ಕಡೆಕೊಳ್ಳ ಗ್ರಾಮದ ಸಿದ್ದಪ್ಪ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿ ಸಿದ್ದಪ್ಪ ಯುವಕ ಯುವತಿಗೆ ಕೆಲಸ ಕೊಡಿಸುವ ನೆಪದಲ್ಲಿ ವಿವಿಧ ಪೋನ್ ನಂಬರಗೆ 86 ಸಾವಿರ ರೂಪಾಯಿ ಹಣವನ್ನ ಪೋನ್ ಪೇ ಮಾಡಿಸಿಕೊಂಡಿದ್ದಾನೆ. ಈ ಹಿನ್ನೆಲೆ ಹಾವೇರಿ ಜಿಲ್ಲಾಧಿಕಾರಿ ಕಚೇರಿ, ಬಸ್ ನಿಲ್ದಾಣದ ಬಳಿ ಹಾವೇರಿ ಪೊಲೀಸರು ಆರೋಪಿ ಸಿದ್ದಪ್ಪನನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿ ಸಿದ್ದಪ್ಪ ನಿಂದ 50 ಸಾವಿರ ರೂಪಾಯಿ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಒಂದು ಓಪೋ ಪೋನ್ ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.