ಹಾವೇರಿ: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಗ್ಯಾಂಗ್‌ನ್ನು ಹಾವೇರಿ ಶಹರ ಪೊಲೀಸರು ಬಂಧಿಸಿದ್ದಾರೆ.
ಹೆದ್ದಾರಿಯಲ್ಲಿ ವಾಹನ ಸವಾರರ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಮೂವರ ಬಂಧಿಸಲಾಗಿದೆ.ಆ.9 ರಂದು ರಾತ್ರಿ ವೇಳೆ ರಾಣೆಬೇನ್ನೂರು ತಾಲೂಕಿನ ಉದಗಟ್ಟಿ ಗ್ರಾಮದ ಪುಟ್ಟಪ್ಪ ಸುಣಗಾರ,ಜಗದೀಶ ಬಾರ್ಕಿ ಎಂಬುವವರನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣವನ್ನು ಬೆನ್ನು ಹತ್ತಿದ ಪೊಲೀಸರು.ಪ್ರವೀಣ ಕಟ್ಟಿಮನಿ(27)ಸಾಗರ ಕಟ್ಟಿಮನಿ(22)ಕೃಷ್ಣಪ್ಪ ಬೋವಿ ವಡ್ಡರ (27) ಎಂಬುವರನ್ನು ಬಂಧಿಸಲಾಗಿದೆ. ಬಂಧಿತರಿಂದ ಕಬ್ಬಿಣದ ರಾಡ್, ಕಪ್ಪು ಬಣ್ಣದ ಚಾಕು, ರೆಡ್ ಜಾಕೆಟ್, ಮೂರು ಮೊಬೈಲ್, ಹೊಂಡ ಕಂಪನಿಯ ಮೋಟರ್ ಬೈಕ್ ವಶಕ್ಕೆ ಪಡೆಯಲಾಗಿದೆ.