ಹಾನಗಲ್: ಹಾನಗಲ್ ತಾಲೂಕಿನ ಸಹಾಯಕ ನಿರ್ದೇಶಕರು ಭೂದಾಖಲೆಗಳ ಇಲಾಖೆಯ ಚಂದ್ರಶೇಖರರವರು ಮನೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಚಂದ್ರಶೇಖರ ಅವರು ಬೆಳಿಗ್ಗೆಯಿಂದ ಕಛೇರಿಗೆ ಬರದ ಹಿನ್ನೆಲೆ ಅವರು ಸಿಬ್ಬಂದಿಗಳು ಫೊನ್ ಕರೆ ಮಾಡಿದ್ದಾರೆ. ಅವರು ಯಾವುದೇ ಕರೆಯನ್ನು ಸ್ವೀಕರಿಸದ ಕಾರಣ ಭೂಮಾಪನ ಇಲಾಖೆಯ ಅವರ ಕಛೇರಿ ಸಿಬ್ದಂದಿ ಚಂದ್ರಶೇಖರ್ ಅವರು ವಾಸವಿದ್ದ ಬಾಡಿಗೆ ಮನೆಯ ಹತ್ತಿರ ಹೋದಾಗ ಬಾಗಿಲು ಒಳಗಡೆಯಿಂದ ಬೀಗ ಹಾಕಿರುವುದು ಕಂಡು ಬಂದಿದೆ. 4. ಗಂಟೆಯ ಸುಮಾರಿಗೆ ಕಿಟಕಿಯಲ್ಲಿ ನೋಡಿದಾಗ ಅವರು ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡು ಬಂದಿದೆ.ಬಳಿಕ ಸಿಪಿಐ ಮತ್ತು ತಹಶೀಲ್ದಾರರು,ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲ ಬಾಗಿಲನ್ನು ತೆಗೆದು ಒಳಹೋದ ನಂತರ ಅವರು ಮೃತಪಟ್ಟಿರುವುದು ಧೃಡಪಟ್ಟಿರುವುದು ಕಂಡುಬಂದಿದೆ. ಬಳಿಕ ಶವವನ್ನು
ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.