ಹಾನಗಲ್ ತಾಲೂಕಿನ ಕಲಗುದ್ರಿ ಗ್ರಾಮದಲ್ಲಿ ಕೆರೆಯಲ್ಲಿ ಮುಳುಗಿ ಮಗುವೊಂದು ಮೃತ ಪಟ್ಟಿದೆ. ಮಧ್ಯಾಹ್ನ ಆಟ ಆಡಿಕೊಂಡ ಹೋದ ಮೂರು ವರ್ಷದ ಅಹ್ಮದ್ ರಜಾ ಎಂಬ ಮಗು ಮೃತ ಪಟ್ಟಿದೆ.ಮಧ್ಯಾಹ್ನದ ವೇಳೆ ಆಟ ಆಡುತ್ತಿದ್ದ ಮಗು ಕಾಣದಿದ್ದ ಸಮಯ ಪಾಲಕರು ಮಗುವನ್ನು ಹುಡುಕಾಡಿದ್ದಾರೆ.ಸಂಜೆ ವರೆಗೆ ಮಗು ಕಂಡಿಲ್ಲ.ಗ್ರಾಮದ ವ್ಯಕ್ತಿಯೋಬ್ಬರು ಮಗುವನ್ನು ಕೊನೆಯದಾಗಿ ಕೆರೆ ಬಳಿ ನೋಡಿದ್ದಾಗಿ ತಿಳಿಸಿದ್ದಾರೆ. ತಕ್ಷಣವೇ ಮಗುವನ್ನು ಕರೆಯ ನೀರಿನಲ್ಲಿ ಹುಡುಕಾಡಿದಾಗ ಮಗುವಿನ ಶವ ಪತ್ತೆಯಾಗಿದೆ.ಶವ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Check Also
Close