
ಹಾವೇರಿ: ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಲ್ಲಾಪುರ ಗ್ರಾಮದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೆ ಕುಟುಂಬದ ನಾಲ್ವರು ಮೃತ ಪಟ್ಟ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಕಾರು ಮತ್ತು ಸಾರಿಗೆ ಸಂಸ್ಥೆಯ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹಾವೇರಿ ಒಂದೇ ಕುಟುಂಬದ ನಾಲ್ವರು ದುರ್ಮರಣ ಹೊಂದಿರುವ ಹೊಂದಿದ್ದಾರೆ.

ಮೃತರನ್ನು ಮಂಜುನಾಥ (ರುದ್ರಪ್ಪ) ಬಾಬಣ್ಣ ಅಂಗಡಿ (52), ಧರ್ಮಪತ್ನಿ ರಾಜೇಶ್ವರಿ ಅಂಗಡಿ (45) ದಂಪತಿಗಳ ಪುತ್ರಿ ಐಶ್ವರ್ಯ ಅಂಗಡಿ (19), ಪುತ್ರ ವಿಜಯ್ ಅಂಗಡಿ (12)ಎಂದು ಗುರುತಿಸಲಾಗಿದೆ.
ಹಾವೇರಿಯ ಇಜಾರಿಲಕಮಾಪುರಬಳಿಯ ಮಾರುತಿ ನಗರದ ನಿವಾಸಿಯಾಗಿದ್ದ ಮಂಜುನಾಥ (ರುದ್ರಪ್ಪ) ಬಾಬಣ್ಣ ಅಂಗಡಿ ಕುಟುಂಬದವರು, ಕಾರಿನಲ್ಲಿ ಹಾವೇರಿಯಿಂದ ನರಗುಂದ ಮಾರ್ಗವಾಗಿ ವಿಜಯಪೂರಕ್ಕೆ ತೆರಳುತ್ತಿದ್ದರೆಂದು ತಿಳಿದು ಬಂದಿದೆ. ಗುಳೇದಗುಡ್ಡದಿಂದ ಕೊಣ್ಣೂರ, ನರಗುಂದ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.ಎರಡು ವಾಹನಗಳು ಮೂಲ ಪಥ ಬದಲಿಸಿದ್ದು, ಬಸ್ ರಸ್ತೆ ಪಕ್ಕದ ಜಮೀನಿಗೆ ನುಗ್ಗಿದೆ. ಘಟನಾ ಸ್ಥಳಕ್ಕೆ ನರಗುಂದಪೊಲೀಸ್‌ರು ಭೇಟಿ ನೀಡಿ ಪರಿಶೀಲನೆ ನಡೆಸಿದರು.