
ಕೊಲಂಬೊ: ಭಾರತ (Team India) ಪಾಕ್ (Pakistan) ನಡುವಿನ ಪಂದ್ಯಗಳಿಗೆ ನಿರಂತರವಾಗಿ ಆಘಾತ ನೀಡುತ್ತಿರುವ ಮಳೆ ಇಂದು ಕೂಡ ಮುಂದುವರೆದಿದೆ. ಮುಂಜಾನೆ ಕೂಡ ಕೊಲೊಂಬೊದಲ್ಲಿ ಮಳೆ ಸುರಿದಿದೆ. ಈ ನಡುವೆ ಎರಡೂ ತಂಡಗಳ ಪಂದ್ಯಕ್ಕೆ ಮೀಸಲು ದಿನವಾದ ಇಂದು ಪಂದ್ಯ ಮುನ್ನೆಡಸಲು ತಯಾರಿ ನಡೆಸಲಾಗುತ್ತಿದೆ.
ಭಾನುವಾರ ಶ್ರೀಲಂಕಾದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಮಳೆಯಿಂದ ಸ್ಥಗಿತಗೊಂಡಿದ್ದ ಭಾರತ ಪಾಕ್ ನಡುವಿನ ಸೂಪರ್ ಫೋರ್ ಪಂದ್ಯ ಇಂದು (ಸೋಮವಾರ) ಅದೇ ಓವರ್‌ನಿಂದ ಮುಂದುವರೆಯಲಿದೆ.