ಬೆಂಗಳೂರು: ಮಂಗಳವಾರದಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳು (International Flight) ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ (Kempegowda Airport) ಟರ್ಮಿನಲ್ 2ನಿಂದ (Terminal-2) ಟೇಕಾಫ್ ಮತ್ತು ಲ್ಯಾಂಡಿಂಗ್ ಆಗಲಿದೆ. ಅಂತಾರಾಷ್ಟ್ರೀಯ ವಿಮಾನಗಳ ಜೊತೆ ದೇಶೀಯ ವಿಮಾನಗಳು ಸಹ ಈ ಟರ್ಮಿನಲ್‌ನಿಂದಲೇ ಕಾರ್ಯಾಚರಣೆ ನಡೆಸಲಿವೆ.
ಈ ಸಂಬಂಧ ಬಿಎಲ್‌ಆರ್ ಏರ್‌ಪೋರ್ಟ್ ಟ್ವೀಟ್ ಮಾಡಿದ್ದು, ಸೆ.12ರ ಬೆಳಗ್ಗೆ 10:45 ರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಜೊತೆ ದೇಶೀಯ ಸೇವೆ ನೀಡುವ ಏರ್ ಏಷ್ಯಾ, ಏರ್ ಇಂಡಿಯಾ, ಸ್ಟಾರ್ ಏರ್, ವಿಸ್ತಾರಾ ಕಂಪನಿಗಳ ವಿಮಾನ ಕಾರ್ಯಾಚರಣೆ ಟರ್ಮಿನಲ್ 2 ನಿಂದ ಆಗಲಿದೆ. ಆಕಾಸಾ ಏರ್, ಅಲೈಯನ್ಸ್ ಏರ್, ಇಂಡಿಗೋ, ಸ್ಪೈಸ್ ಜೆಟ್ ವಿಮಾನಗಳು ಟರ್ಮಿನಲ್ 1 ರಲ್ಲಿ ಟೇಕಾಫ್, ಲ್ಯಾಂಡಿಂಗ್ ಆಗಲಿದೆ ಎಂದು ತಿಳಿಸಿದೆ.