ಕರ್ನಾಟಕ

ರೈತರಿಗಾಗಿ ಗದ್ದುಗೆ ಏರಲಿದೆ ರೈತ ಅಭಿವೃದ್ಧಿ ಸಹಕಾರ ಪೆನಲ್…

ಬೆಳಗಾವಿ :- ಎಂ ಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅ.14 ರಂದು ನಡೆಯುವ ಆಡಳಿತ ಮಂಡಳಿ ಚುನಾವಣೆಯಲ್ಲಿ ಭಾರಿ ಮತಗಳಿಂದ ರೈತ ಅಭಿವೃದ್ಧಿ ಸಹಕಾರ ಪೆನಲ್ ಜಯ ಸಾಧಿಸಲಿದೆ ಎಂದು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲರ ಸುಪುತ್ರ ಪ್ರಕಾಶಗೌಡ ಪಾಟೀಲ ಹೇಳಿದರು.

ಚಿಕ್ಕ ಬಾಗೇವಾಡಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ ಪ್ರಚಾರ ಭರ್ಜರಿಯಿಂದ ನಡೆದಿದೆ.ಬುಧವಾರ ಮತದಾನ ನಡೆಯಲಿದೆ ಎಂದರು.
ಸಕ್ಕರೆ ಉತ್ಪಾದನೆ, ಗುಣಮಟ್ಟ, ಇನ್ನಿತರ ಕಾರ್ಯದಲ್ಲಿ ರಾಜ್ಯದ ಇನ್ನಿತರ ಸಕ್ಕರೆ ಕಾರ್ಖಾನೆಗಳಿಕ್ಕಿಂತ ಮಾದರಿ ಕಾರ್ಖಾನೆಯಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಪ್ರಕಾಶಗೌಡ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ರೈತ ಅಭಿವೃದ್ಧಿ ಸಹಕಾರಿ ಪೆನಲ್ ‘ಬ’ಅಭ್ಯರ್ಥಿ ಸಂಗಮೇಶ ವಾಲಿ ಮಾತನಾಡಿ ನಮ್ಮ ಪೆನಲ್ ನ ಎಲ್ಲ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತ ನೀಡಿ ರೈತರ ಹಾಗೂ ಕಾರ್ಮಿಕರ ಸೇವೆ ಮಾಡಲು ಅವಕಾಶ ಮಾಡಿ ಕೂಡಿ ಎಂದು ವಿನಂತಿಸಿದರು

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!