RCB ಒಂದು ಹೆಸರಲ್ಲ ಅದೊಂದು ಎಮೋಷನ್, ಪ್ರಪಂಚದಲ್ಲಿ ಅತ್ಯಂತ ವಿಶಿಷ್ಟ ಪ್ಯಾನ್ ಪಾಲೋವರ್ಸ ಹೊಂದಿದ್ದು RCB ಮಾತ್ರ.

ಧಾರವಾಡ :- ಇವತ್ತು ನೆಡೆದ ಚೆನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಕ್ರಿಕೆಟ್ ಪಂದ್ಯದ ನಿಮಿತ್ತವಾಗಿ ಅಭಿಮಾನಿಗಳು ವಿಶೇಷ ಪೂಜೆ ಮಾಡಿಸುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಹೌದು ಶನಿವಾರದ ಎರಡನೇ ಪಂದ್ಯವಾದ ಚೆನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ನಡೆಯದಿದ್ದು, ಈ ಪಂದ್ಯವನ್ನು ಬೆಂಗಳೂರು ತಂಡ ಗೆಲ್ಲಲಿ ಎಂದು ಧಾರವಾಡದ ನುಗ್ಗಿಕೇರಿ ಹಣಮಂತ ದೇವಸ್ಥಾನದಲ್ಲಿ ಅಭಿಮಾನಿಗಳು 101 ರೂಪಾಯಿಗಳ ಅಭಿಷೇಕವನ್ನು ಮಾಡಿಸಿದ್ದಾರೆ.
ಇನ್ನೂ ವಿಶೇಷ ಅಂದ್ರೆ ರಾಶಿ ಸ್ಥಳದಲ್ಲಿ ವಿರಾಟ್ ಕೊಹ್ಲಿ ಹೆಸರನ್ನು ಮತ್ತು ಗೋತ್ರದ ಸ್ಥಳದಲ್ಲಿ ಎ ಬಿ ಡಿ ವಿಲಿಯರ್ಸ್ ಹೆಸರನ್ನು ಬರೆಸಿ ತಮ್ಮ ಅಪಾರ ಅಭಿಮಾನವನ್ನು ತೋರಿದ್ದಾರೆ. ಇವತ್ತಿನ ಪಂದ್ಯದಲ್ಲಿ RCB 37 ರನ್ಗಳ ಜಯ ಗಳಿಸಿದೆ.
ಇದೊಂದೆ ಅಲ್ಲ ಇಂತಹ ಅದೆಷ್ಟೋ ಪೂಜೆಯ ರಶೀದಿಗಳು RCB ಹೆಸರಿನಲ್ಲಿ ಹಿಂದೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದುವರೆಗೂ ಐಪಿಎಲ್ ನಲ್ಲಿ
ಒಂದು ಸಾರಿಯೂ ಕಪ್ ಜಯಿಸದ RCB ಗೆ ಸಾಗರದಂತ ಅಭಿಮಾನಿಗಳ ಗುಂಪಿದೆ ಅದಕ್ಕೆ ಕನ್ನಡಿಗರ ಬದಲಾಗದ ಪ್ರೀತಿ ಮತ್ತು ನಂಬಿಕೆಯೇ ಕಾರಣವಾಗಿದ್ದು, ಈ ಸಲ ಕಪ್ ನಮ್ದೆ ಎನ್ನುವ ಘೋಷ ವಾಕ್ಯದೊಂದಿಗೆ ಪ್ರೀತಿ ಬಾವುಟ ಹಿಡಿದು RCB ಗೆ ಜೈಕಾರ ಹಾಕುವುದನ್ನು ನೋಡುವುದೇ ಚೆಂದ..
#ದೀಪಾ ಮಂಜರಗಿ