ದೇಶ & ವಿದೇಶ
ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆ…

ಹೌದು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ರ ಕರೆಯ ಮೇರೆಗೆ ಉತ್ತರ ಕರ್ನಾಟಕದ ರಾಜಕೀಯದ ರೆಬೆಲ್ ಶಾಸಕ ಎಂದೇ ಹೆಸರುವಾಸಿಯಾಗಿರುವ ಮತ್ತು ಜಲ ಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ತುರ್ತು ಮುಂಬೈಗೆ ತೆರೆಳಿದ್ದಾರೆ.
ಇದು ಮಹಾರಾಷ್ಟ್ರದ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಉಭಯ ನಾಯಕರು ಇದೇ ತಿಂಗಳು ಎರಡು ಸಲ ಭೇಟಿ ಮಾಡಿದ್ದು, ಮಹಾರಾಷ್ಟ್ರ ರಾಜಕಾರಣವು ಕುತೂಹಲಕಾರಿ ಬೆಳವಣಿಗೆಯತ್ತ ಹೆಜ್ಜೆ ಹಾಕಿದೆ ಎಂದರೆ ತಪ್ಪಾಗಲಾರದು.