ಕರ್ನಾಟಕ

ಮಾಸ್ಕ‌ ಬಳಿಸದಿದ್ರೇ ಬಿಳುತ್ತೆ ಭಾರೀ‌ ದಂಡ, ಮತ್ತಷ್ಟು ಕಠಿಣಗೊಳ್ಳಲಿವೆ ರಾಜ್ಯ ಸರ್ಕಾರದ ನಿಯಮಗಳು..

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಮತ್ತಷ್ಟು ಬಿಗಿ ಕ್ರಮವನ್ನು ಕೈಗೊಂಡಿರುವಂತ ರಾಜ್ಯ ಸರ್ಕಾರ, ಮಾಸ್ಕ್ ಧರಿಸೋದು ಕಡ್ಡಾಯ ನಿಯಮವನ್ನು ಮತ್ತಷ್ಟು ಬಿಗಿ ಗೊಳಿಸಿದೆ. ಮಾಸ್ಕ್ ಅನ್ನು ಧರಿಸದೇ ನಗರ ಪ್ರದೇಶದಲ್ಲಿ ಓಡಾಡಿದ್ರೆ ಅಂತವರಿಗೆ ರೂ.1000 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸದವರಿಗೆ ರೂ.500 ದಂಡವನ್ನು ವಿಧಿಸುವ ನಿಯಮವನ್ನು ಜಾರಿಗೆ ತರಲಾಗಿದೆ ಎಂಬುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಕುರಿತಂತೆ ವಿಧಾನಸೌಧದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಸ್ಕ್ ಧರಿಸದವರಿಗೆ ದಂಡ ಶುಲ್ಕವನ್ನು ಮತ್ತಷ್ಟು ಹೆಚ್ಚಿಸಲಾಗಿದೆ.ನಗರ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಓಡಾಡುವವರಿಗೆ ರೂ.1000 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಓಡಾಡುವ ಜನರಿಗೆ ರೂ.500 ದಂಡವನ್ನು ವಿಧಿಸಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ.

ಇನ್ನೂ ಅಂಗಡಿ ಮುಂಗಟ್ಟುಗಳ ಎದುರು ಸಾಮಾಜಿಕ ಅಂತರ ಕಾಯ್ದುಗೊಳ್ಳೋದು ಕಡ್ಡಾಯವಾಗಿದೆ. ಅಂಗಡಿ ಮುಂಗಟ್ಟುಗಳ ಬಳಿ ಗ್ರಾಹಕರು, ಅಂಗಡಿಯವರು 6 ಅಡಿಗಳ ಅಂತರ ಕಾಯ್ದುಗೊಳ್ಳಬೇಕು. ಹೀಗೆ ಅಂತರ ಕಾಯ್ದುಕೊಳ್ಳದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದರು.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!