ಕರ್ನಾಟಕಜಿಲ್ಲಾ

ಸಿಎಂ ಆಗತಿದ್ರು ಸುರೇಶ ಅಂಗಡಿ ದುರ್ದೈವದಿಂದ ನಿಧನರಾದರು, ಬೈ ಎಲೆಕ್ಷನನಲ್ಲಿ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿ : ಲಿಂಗರಾಜ್ ಪಾಟೀಲ.

ಬೆಳಗಾವಿ: ನಾಲ್ಕು ತಿಂಗಳಲ್ಲಿ ಸುರೇಶ ಅಂಗಡಿ ರಾಜ್ಯದ ಸಿಎಂ ಆಗತ್ತಿದ್ರು ಆದರೆ ದುರ್ದೈವದಿಂದ ಅವರು ಮೃತಪಟ್ಟಿದ್ದು ಜಿಲ್ಲೆ, ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಸುರೇಶ ಅಂಗಡಿ ಸೋದರ ಮಾವಾ ಲಿಂಗರಾಜ್ ಪಾಟೀಲ ಬಹಿರಂಗ ಪಡಿಸಿದ್ದಾರೆ

ಇಂದು ಬೆಳಗಾವಿಯಲ್ಲಿ ಮಾತನಾಡಿದ ಅವರು ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ದೇಹಲಿ ಮುಖಂಡರೋಂದಿಗೆ ಸಭೆ ನಡೆದಿತ್ತು ಅದರಲ್ಲಿ ಲಿಂಘಾಯತ ಮುಖಂಡರನ್ನು ಸಿಎಂ ಆಗಿ ಆಯ್ಕೆ ಮಾಡುವ ನಿರ್ಣಯ ಕೈಗೊಂಡಿದ್ದರಿಂದ ಸುರೇಶ ಅಂಗಡಿ ಅವರ ಹೆಸರು ಮುಂಚೂನಿಯಲ್ಲಿತ್ತು ಆದರೆ ದುರಾದೃಷ್ಟವಶಾತ್ ಅವರು ನಮ್ಮನ್ನು ಅಗಲಿದ್ದಾರೆ ಎಂದರು. ಇದೀಗ ಬೆಳಗಾವಿಗೆ ಸಂಹತ್ ಚುನಾವಣೆ ಟಿಕೆಟನ್ನು ಅವರ ಕುಟುಂಬದ ಸದ್ಯರಿಗೆ ನೀಡುವಂತೆ ಜನರ ಒತ್ತಾಯ ವಾಗಿದ್ದು ನಾನು ಇವತ್ತು ರಾಜ್ಯದ ಅಧ್ಯಕ್ಷರ ಮುಂದೆ ಹೇಳಿದ್ದೇನೆ ಅವರು ಸಕಾರಾತ್ಮಕ ರೀತಿಯಲ್ಲಿ ಸ್ಪಂದನೆ ಮಾಡಿದ್ದಾರೆ ಇದರಿಂದ ಬೆಳಗಾವಿ ಲೋಕಸಭಾ ಬಹುಮತದಿಂದ ಗೆಲ್ಲಲ್ಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಕುಟುಂಬದಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬ ಚರ್ಚೆಯಾಗಿಲ್ಲ ಕುಟುಂಬ ಸದಸ್ಯರು ಸುರೇಶನನ್ನು ಕಳೆದುಕೊಂಡ ದುಖಃದಲ್ಲಿದ್ದಾರೆ‌. ಜಗದೀಶ್ ಶೆಟ್ಟರ್ ಸೊಸೆ ಸಹ ಸುರೇಶ ಅಂಗಡಿಯವರ ಮಗಳಾಗಿದ್ದು ಅವರಿಗೂ ಟಿಕೇಟ್ ಕೊಡುವ ಸಾಧ್ಯತೆ ಇದೆಯಾದರೂ ಸುರೇಶ ಪತ್ನಿ ಮಂಗಳಾಗೆ ಟಿಕೆಟ್ ನೀಡಲು ಒತ್ತಾಯ ಮಾಡಲಾಗುತ್ತದೆ. ಇದರ ಬಗ್ಗೆ ಎಲ್ಲರು ಸೇರಿ ಚರ್ಚೆ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!