ದೇಶ & ವಿದೇಶ

ಅಸ್ತಗತ ಸಂಸದ ಸುರೇಶ ಅಂಗಡಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿತ್ತಿರುವ ಗಣ್ಯರು..

ಬೆಳಗಾವಿ :- ಕೊರೋನಾ ಸೊಂಕು ತಗಲಿದ್ದರಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ದೆಹಲಿಯಲ್ಲೇ ನಡೆಯಲಿದೆ ಎಂದು ತಿಳಿದು ಬಂದಿದೆ.

ನಿನ್ನೆ ರಾತ್ರಿ ಸಚಿವ ಸುರೇಶ್ ಅಂಗಡಿ ಅವರು ನಿಧನರಾದ ಬಳಿಕ,ಅವರ ಪಾರ್ಥೀವ ಶರೀರವನ್ನು ಬೆಳಗಾವಿಗೆ ತರಲು ಸಚಿವರಾದ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕ ಜನ ಕರ್ನಾಟಕದ ನಾಯಕರು ದೆಹಲಿಯಲ್ಲಿ ಹಲವಾರು ರೀತಿಯ ಪ್ರಯತ್ನಗಳನ್ನು ಮಾಡಿದರು,ರಾತ್ರಿ ಜಗದೀಶ್ ಶೆಟ್ಟರ್ ಅವರು ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ದೆಹಲಿಗೆ ತೆರಳಿ ಅವರೂ ಪ್ರಯತ್ನ ಮುಂದುವರೆಸಿದರು,ಆದ್ರೆ ಕೋವೀಡ್ ನಿಯಮಾವಳಿಗಳ ಪ್ರಕಾರ ಸುರೇಶ್ ಅಂಗಡಿ ಅವರ ಪಾರ್ಥೀವ ಶರೀರ ಬೆಳಗಾವಿಗೆ ತರಲು ಕೇಂದ್ರದ ಅನುಮತಿ ಸಿಗದೇ ಇರುವದರಿಂದ,ಕೊನೆಗೆ ದೆಹಲಿಯಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾಣಿಸಲಾಗಿದೆ ಎಂದು ದೆಹಲಿಯ ಮೂಲಗಳು ಖಚಿತಪಡಿಸಿವೆ.

ಇಂದು ಸಂಜೆ 4 ಗಂಟೆಗೆ ದೆಹಲಿಯ ಲೋಧಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದ್ದು ರಾಜ್ಯದ ಬಿಜೆಪಿ ನಾಯಕರು,ಮತ್ತು ಆಪ್ತರು ಇಂದು ಬೆಳಿಗ್ಗೆ 5 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ದೌಡಾಯಿಸಿದ್ದಾರೆ.

ಸುರೇಶ್ ಅಂಗಡಿ ಅವರ ಧರ್ಮಪತ್ನಿ‌ ಮಂಗಳಾ,ಮಗಳು ಶ್ರದ್ಧಾ,ಮತ್ತು ಹಿರಿಯ ಅಳಿಯ ದೆಹಲಿಯಲ್ಲಿದ್ದಾರೆ. ಬೆಳಗಾವಿಯ ಸದಾಶಿವ ನಗರದ ಮನೆಯಲ್ಲಿ ಹಿರಿಯ ಮಗಳು ಡಾ.ಸ್ಪೂರ್ತಿ ಇದ್ದು ಅವರ ಜೊತೆ ಸುರೇಶ್ ಅಂಗಡಿ ಅವರ ಸಹೋದರರು ವಿಶೇಷ ವಿಮಾನದ ಮೂಲಕ ಬೆಳಗಾವಿಯಿಂದ ದೆಹಲಿಗೆ ತೆರಳಲಿದ್ದಾರೆ. ದೆಹಲಿಯ ದ್ವಾರಕಾ ಸೆಕ್ಟರ್ ನಂಬರ್ 4 ನಲ್ಲಿ ಇರೋ ಲಿಂಗಾಯತ ರುದ್ರಭೂಮಿಯಲ್ಲಿ,ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ನಾಲ್ಕು ಭಾರಿ ಸಂಸದರಾಗಿ ಸೋಲನ್ನೆ ಅರಿಯದ ಸರದಾರರಂತಿದ್ದ ಸುರೇಶ ಅಂಗಡಿ ತಮ್ಮ ರಾಜಕೀಯ ಜೀವನದಲ್ಲಿ ವಿವಾದಿಂದ ದೂರ ಇದ್ದ ಸರಳ ನಾಯಕರಾಗಿದ್ದರು ಅವರ ಅಗಲಿಕೆ ರಾಜ್ಯಕ್ಕೆ ಒಂದು ದೊಡ್ಡ ನಷ್ಟವಾಗಿದ್ದು ಅವರ ಹಿಂಬಾಲಕರು ಅಭಿಮಾನಿಗಳು ಸಹ ದುಃಖದ ಮಡುವಿನಲ್ಲಿ ಮುಳುಗಿದ್ದಾರೆ ಇನ್ನು ರಾಜ್ಯ ಹಲವಾರು ನಾಯಕರು ಅವರ ಸಾವಿಗೆ ಶೋಕ ವ್ಯಕ್ತಪಡಿಸಿದ್ದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಶಾಸಕ ಸತೀಶ ಜಾರಕಿಹೊಳಿ, ಸಚೀವ ರಮೇಶ ಜಾರಕಿಹೊಳಿ,ಡಾ. ಪ್ರಭಾಕರ ಕೋರೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆಶಾ ಪ್ರಶಾಂತರಾವ್ ಐಹೊಳೆ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾಂತೇಶ ಕವಟಗಿಮಠ, ಆನಂದ ಮಾಮನಿ, ಸಂಸಂದ ಅಣ್ಣಾಸಾಹೇಬ ಜೊಲ್ಲೆ, ಸಚಿವೆ ಶಶಿಕಲಾ ಜೊಲ್ಲೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಿಜೆಪಿ ಮುಖಂಡ ಕಿರಣ ಜಾಧವ ಮೊದಲಾದವರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!