ದೇಶ & ವಿದೇಶ

ಕೊರೊನಾಗಿಂತ ಹೆಚ್ಚು ಅಪಾಯಕಾರಿ ಬ್ಯಾಕ್ಟೀರಿಯಾ ಒಂದು ಚೀನಾದಲ್ಲಿ ಪತ್ತೆಯಾಗಿದೆ.

ಬೀಜಿಂಗ್ :- ಹೌದು ಚೀನಾ ಎಂದ‌ ಕೂಡಲೇ ನೆನೆಪಿಗೆ ಬರೋದು ಕರೋನಾ ವೈರಸ್. ಆದರೆ ಈಗ ಕರೋನಾ ವೈರಸಕ್ಕಿಂತ ಹೆಚ್ಚು ಅಪಾಯಕಾರಿ ಬ್ಯಾಕ್ಟೀರಿಯಾ ಒಂದು ಚೀನಾದಲ್ಲಿ ಪತ್ತೆಯಾಗಿದೆ‌. ಈ ಬ್ಯಾಕ್ಟೀರಿಯಾವು ಪುರುಷತ್ವ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಪಶುಗಳಿಗೆ ಚುಚ್ಚುಮದ್ದು ತಯಾರಿಸುವ ಚೀನೀ ಔಷಧಿ ಕಾರ್ಖಾನೆಯೊಂದರಿಂದ ಬ್ರುಸೆಲಾ ಬ್ಯಾಕ್ಟೀರಿಯಾ ಹರಡಿದೆ. ಇದು ಪುರುಷರನ್ನು ನಿರ್ವೀರ್ಯಗೊಳಿಸುವಷ್ಟು ಅಪಾಯಕಾರಿ ಎನ್ನಲಾಗಿದೆ.

ಚೀನಾದಲ್ಲಿ ಹರಡುತ್ತಿರುವ ಈ ಬ್ಯಾಕ್ಟೀರಿಯಾಗೆ ಬ್ರುಸೆಲಾ ಎಂದು ಕರೆಯಲಾಗಿದೆ‌. ಈ ಸೋಂಕು ಹರಡುವಿಕೆಯನ್ನು ಚೀನಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಚೀನಾ ವಾಯವ್ಯ ಭಾಗದ ಗಾನ್ಸು ಪ್ರಾಂತ್ಯದ 3,245 ಜನರಿಗೆ ಬ್ರುಸೆಲಾ ಸೋಂಕು ತಾಕಿದೆ ಎಂದು ನಗರದ ಆರೋಗ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ. ಇದು ಚುಚ್ಚುಮದ್ದು ತಯಾರಿಸುವ ಫಾರ್ಮಾದ ಮೂಲಜ ಸೋರಿಕೆಯಾಗಿದ ಬ್ಯಾಕ್ಟೀರಿಯಾ ಈ ಸೋಂಕಿಗೆ ಕಾರಣವೆಂಬುವುದು ತಿಳಿದುಬಂದಿದೆ.

ಈ ಸೋಂಕಿನ ಪ್ರಮುಖ ಲಕ್ಷಣಗಳೆಂದರೆ ತಲೆನೋವು, ಸುಸ್ತು, ಸ್ನಾಯುನೋವು, ಜ್ವರ ಮತ್ತು ಕೆಲ ಸೋಂಕಿತರಿಗೆ ಅರ್ಥೈಟಿಸ್ ಹಾಗೂ ಇತ್ಯಾದಿ ಸಮಸ್ಯೆಗಳು ಕೊನೆಯವರೆಗೂ ಬಾಧಿಸಬಹುದು. ಅಮೇರಿಕಾ ತಜ್ಞರ ಪ್ರಕಾರ ಈ ಸೋಂಕು ಪುರುಷತ್ವಕ್ಕೆ ಅತಿ ಹೆಚ್ಚು ಪೆಟ್ಟು ನೀಡುತ್ತದೆ ಎಂದು ತಿಳಿಸಿದ್ದಾರೆ.


ಅದೇನೇ ಇರಲಿ ಕರೋನಾದಿಂದ ಕಂಗಾಲಾದ ಪ್ರಪಂಚಕ್ಕೆ ಮತ್ತೊಂದು ಹೊಡೆತ ಬಿಳದ್ದಿದರೇ ಅಷ್ಟೇ ಸಾಕು..

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!