ಜಿಲ್ಲಾ

ಇಲ್ಲಿ ರಸ್ತೆ ಯಾವುದು ಮತ್ತು ಚರಂಡಿ ಯಾವುದು ? ಎಂಬುವುದು ತಿಳಿಯದಾಗಿದೆ.


ಬೆಳಗಾವಿ :- ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳು ಕಣ್ಣು ಮುಚ್ಚು ಕುಳಿತಿದ್ದಾರೆಯೇ? ಎಂಬ ಪ್ರಶ್ನೆ ಕಾಡುತ್ತಿದೆ.
ಗ್ರಾಮದ ಸ್ಮಶಾನಕ್ಕೆ ಹೊಂದಿಕೊಂಡು ಇರುವ ಪ್ಲಾಟನ ರಸ್ತೆಗಳು ‌ಸಂಪೂರ್ಣವಾಗಿ ಕೆಸರು ಗದ್ದೆಯಾಗಿವೆ.‌ ಚರಂಡಿಗಳು ಮಣ್ಣಿನಲ್ಲಿ ಮುಚ್ಚಿಹೋಗಿವೆ. ಈ ಕುರಿತಂತೆ ಅನೇಕ ಭಾರಿ ಗ್ರಾಮ ಪಂಚಾಯತಿಗೆ ಮೌಖಿಕವಾಗಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅದೇನೇ ಇರಲಿ ಸಾಂಕ್ರಾಮಿಕ ರೋಗಗಳ‌ ಆವಾಸ ಸ್ಥಾನವಾಗುವ ಮುಂಚೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿದರೇ ಸೂಕ್ತ ಎಂದು ಮಲ್ಲಿಕಾರ್ಜುನ ಬಡಿಗೇರ ತಿಳಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!