ಜಿಲ್ಲಾ

ಮಳೆ ಅವಾಂತರ ಮನೆಗೆ ನುಗ್ಗಿದ ನೀರು. ವಿದ್ಯುತ್ ಮಗ್ಗಗಳಿಗೆ ಹಾನಿ, ಅತಂತ್ರ ಸ್ಥಿತಿಯಲ್ಲಿ ಸ್ಥಳೀಯರು…

ಬೆಳಗಾವಿ :- ರಾಮದುರ್ಗದಲ್ಲಿ ಇಂದು ಮಧ್ಯಾಹ್ನ ಸುರಿದ ಭಾರಿ ಮಳೆಗೆ ರಾಂಪೂರ ಪೇಟೆಯ ಹಲವು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಇಲ್ಲಿಯ ನಿವಾಸಿಗಳಾದ ನಿವಾಸಿಗಳಾದ ಲಕ್ಷ್ಮವ್ವ ನಾರಾಯಣ ಶಿರೂರ ಮತ್ತು ಮಾರುತಿ ಕೇಶಪ್ಪ ವಾಸನದ ಅವರ ಮನೆಗೆ ನುಗ್ಗಿದ ನೀರು ವಿದ್ಯುತ್ ಮಗ್ಗದ ಸಲಕರಣೆಗಳಿಗೆ ನಷ್ಟ ಉಂಟಾಗಿದೆ. ಅಡುಗೆಮನೆಗೆ ನುಗ್ಗಿದ ನೀರು ಅವಾಂತರ ಸೃಷ್ಟಿಸಿದೆ. ಇರುವ ತಗಡಿನ ಶೆಡ್ಡಿನಲ್ಲಿ ಅಡುಗೆ ಮಾಡಿಕೊಂಡು ರಾತ್ರಿ ಕಳೆಯುವ ಸಂದರ್ಭ ಬಂದಿದೆ. ಮತ್ತೊಂದೆಡೆ ಹಸಿಗೂಸು ಇರುವ ಮನೆಯಲ್ಲಿ ಇಂದು ರಾತ್ರಿಯಿಡೀ ಜಾಗರಣೆ ಮಾಡುವ ಸಂಕಷ್ಟ ಎದುರಾಗಿದೆ.

ಇದು ಇಂದು ನಿನ್ನೆಯ ಸಮಸ್ಯೆಯಲ್ಲ ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಮಳೆಗಾಲದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇಲ್ಲಿನ ಪ್ರತಿಯೊಂದು ಮನೆಯಲ್ಲಿ ಅಂತರ್ಜಲದಿಂದ ನೀರು ನುಗ್ಗುತ್ತದೆ. ಕೊಳಚೆ ಪ್ರದೇಶದ ಜನರು ಕೊಳಕು ಚರಂಡಿ ಮತ್ತು ಅಭಿವೃದ್ಧಿ ಕಾಣದ ರಸ್ತೆಯ ಮಧ್ಯೆ ಜೀವಿಸಬೇಕಾಗಿದೆ.

ಹಲವು ಬಾರಿ ಇಲ್ಲಿನ ನಾಗರೀಕರು ಸಂಬಂಧಪಟ್ಟ ಶಾಸಕರಿಗೆ, ಪುರಸಭೆ ಅಧಿಕಾರಿಗಳಿಗೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಇವರ ಗೋಳು ಕೇಳುವವರೇ ಇಲ್ಲದಂತಾಗಿದೆ.

ಕನಿಷ್ಠ ಸೌಜನ್ಯಕ್ಕಾದರೂ ಇವರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ನೀಡಿ ಪುಣ್ಯ ಕಟ್ಟಿಕೊಳ್ಳಿ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!