ಕರ್ನಾಟಕಜಿಲ್ಲಾ

ಡಿಸಿಎಂ ಸ್ಥಾನಕ್ಕಾಗಿ ದೇವರ ಮೊರೆ ಹೋದ್ರಾ ಸಚಿವ ಶ್ರೀರಾಮಲು…?

ಯಾದಗಿರಿ :- ಡಿಸಿಎಂ ಸ್ಥಾನಕ್ಕಾಗಿ ಕಮಲ ಪಾಳ್ಯಯದ ಘಟಾನುಘಟಿ ನಾಯಕರ ಮದ್ಯ ಮತ್ತೇ ಹಣಾಹಣಿ ಶುರುವಾಗಿದೆ. ಪ್ರತಿಸಲ ಗೆಲವಿಗಾಗಿ ದೇವರ ಮೊರೆ ಹೋಗುವಂತೆ ಈಗಲು ಹಲವು ಕಮಲ ನಾಯಕರು ದೇವರ ಮೊರೆ ಹೋಗುತ್ತಿದ್ದು ಇಂದು ಸಚೀವ ಬಿ. ಶ್ರೀರಾಮಲು ಗಡೆ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿದ್ದಾರೆ. ಮಂದಿರದ ಅರ್ಚಕ ಮರಿಸ್ವಾಮಿ ನೇತೃತ್ವದಲ್ಲಿ ಗರ್ಭದ ಗುಡಿಯೊಳಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದು ಡಿಸಿಎಂ ಸ್ಥಾನ ಸಿಗಲೆಂದು ಹಾಗು ರಾಜ್ಯವು ಕೊರೋನಾ ಮುಕ್ತವಾಗಲೆಂದು ಸಚಿವರು ದೇವಿಯ ಮೊರೆ ಹೋಗಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇನ್ನೂ ಮತ್ತೊಂದೆಡೆ ರೆಬಲ್ ನಾಯಕರೆಂದೇ ಗುರುತಿಸಿಕೊಂಡಿದ್ದ ಸಚೀವ ರಮೇಶ ಜಾರಕಿಹೊಳಿಯೂ ಡಿಸಿಎಂ ಕುರ್ಚಿಯ ಸ್ಪರ್ಧೆಯಲ್ಲಿರುವುದು ತಿಳಿದು ಬಂದಿದೆ. ಉತ್ತರ ಕರ್ನಾಟಕದಲ್ಲಿ ಡಿಸಿಎಂ ಸ್ಥಾನವನ್ನು ನನಗೇ ಕೊಡಬೇಕೆಂದು ಪಕ್ಷದ ನಾಯಕರ ಮೇಲೆ ಒತ್ತಡ ತರುತ್ತಿದ್ದು ಆ ಸ್ಥಾನಕ್ಕಾಗಿ ಶ್ರೀರಾಮಲು ದೇವರ ಮೊರೆ ಹೋಗಿದ್ದಾರೆ.

ಇಂತಹ ಸಂದರ್ಭದಲ್ಲಿ ನಾಯಕರು ದೇವರ ಮೊರೆ ಹೋಗುವುದು ಇದೇ ಮೊದಲ ಬಾರಿ ಏನಲ್ಲ ಈ ಹಿಂದೆಯೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂಕಷ್ಟದಿಂದ ಪಾರಾಗಲೂ ಗಡಿ ದುರ್ಗಾದೇವಿಯ ಮೊರೆ ಹೋಗಿದ್ದರು. ಅದೇ ಕಾರಣಕ್ಕಾಗಿಯೇ ರಾಜಕೀಯ ಜೀವನದಲ್ಲಿ ಉತ್ತಮ ಸ್ಥಾನ ದೊರೆತಿದೆ ಎಂದು ಹೇಳಲಾಗುತ್ತಿದ್ದು. ದೇವಿಯು ಸಚಿವ ಶ್ರೀರಾಮಲುಗೆ ಯಾವ ರೀತಿ ವರಪ್ರಸಾದ ನೀಡುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!