ಕರ್ನಾಟಕಜಿಲ್ಲಾ

ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಮೋಚನೆಯ ಸಂಭ್ರಮ- ಸ್ವಾತಂತ್ರ್ಯ ತಡವಾಗಲು ಇದೆ ರೋಚಕ ಕಾರಣ.!

ಸ್ಪೇಷಲ್ ರಿಪೋರ್ಟ್-
ಕಲಬುರಗಿ- ಆಗಷ್ಟ್ 15, 1947ರಂದು ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕಿತು, ಪ್ರತಿ ವರ್ಷ ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಣೆ ಮಾಡಲುತ್ತಿದೆ. ಆದರೇ ಭಾರತದ ಕೆಲ ಪ್ರಾಂತ್ಯಗಳಿಗೆ ಮಾತ್ರ ಅಂದು ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಈ ಪೈಕಿ ಹೈದ್ರಾಬಾದ್ ಸಂಸ್ಥಾನವು ಪ್ರಾಂತ್ಯವು ಸೇರಿತ್ತು. ಎರಡು ವರ್ಷಗಳ ಸತತ ಹೋರಾಟದ ಬಳಿಕ ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ವಿಮೋಚನೆ ಸಿಕ್ಕಿತು. ಇಂದಿಗು ಸೆ.17ರಂದು ಈ ಭಾಗದಲ್ಲಿ ವಿಮೋಚನಾ ದಿನ ಎಂದು ಆಚರಣೆ ನಡೆಯುತ್ತದೆ.

ದೇಶ ಸ್ವಾತಂತ್ರ್ಯಕ್ಕೂ ಮೊದಲು 565 ವಿವಿಧ ಸಂಸ್ಥಾನಗಳು ಇದ್ದವು. ಪೈಕಿ ಬಹುತೇಕ ಸಂಸ್ಥಾನಗಳು ಭಾರತದಲ್ಲಿ ವಿಲಿನಗೊಂಡವು. ಆದರೇ ಜಮ್ಮು-ಕಾಶ್ಮೀರದ ರಾಜ ಹರಿಸಿಂಗ್, ಪಂಜಾಬ ಪ್ರಾಂತ್ಯದ ಜುನಾಗಡ ಸಂಸ್ಥಾನದ ಮಹಾರಾಜ ಮೋಹಮ್ಮದ್ ಮಹಾಬಾತ್ ಕಣಜಿ ಹಾಗೂ ಹೈದ್ರಾಬಾದ ಸಂಸ್ಥಾನದ ನಿಜಾಮುದ್ದಿನ್ ಮೀರ್ ಉಸ್ಮಾನ ಅಲೀ ಖಾನ್ ಇವರು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರ್ಪಡೆಯಾಗಲಿಲ್ಲ.

ನಿಜಾಮ್ ಸಂಸ್ಥಾನವು ಪ್ರತ್ಯೇಕ ರಾಷ್ಟ್ರವಾಗಿ ಉಳಿಯಲು ನಿರ್ಧಿಸಿತ್ತು. ಹೈದ್ರಾಬಾದ್ ಸಂಸ್ಥಾನವನ್ನು ಪಾಕಿಸ್ತಾನ ಸ್ವತಂತ್ರ್ಯ ರಾಷ್ಟ್ರ ಎಂದು ಮಾನ್ಯ ಮಾಡಿತ್ತು. ಇದನ್ನು ವಿರೋಧಿಸಿದ ಸಂಸ್ಥಾನದ ಜನರ ಮೇಲೆ ಹೈದ್ರಾಬಾದ್ ನಿಜಾಮ್ ಸರ್ಕಾರ ತನ್ನ ಸೇನೆಯನ್ನು ಬಳಸಿಕೊಂಡು ಅನೇಕ ಅನ್ಯಾಯ, ಅತ್ಯಾಚಾರ, ದೌರ್ಜನ್ಯವನ್ನು ನಿರಂತರವಾಗಿ ಏಸಗಿತು. ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಸ್ವಾತಂತ್ರ್ಯಕ್ಕಾಗಿ ದೊಡ್ಡ ಚಳುವಳಿಯನ್ನು ನಡೆಸಲಾಯಿತು. ಹೀಗೆ ಚಳುವಳಿಯಲ್ಲಿ ನಡೆಸಿ ನಿಜಾಮ್ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದ ಅನೇಕರನ್ನು ಹತ್ಯೆ ಸಹ ಮಾಡಲಾಗಿತ್ತು.

ಹೈದ್ರಾಬಾದ್ ಸಂಸ್ಥಾನ ವ್ಯಾಪ್ತಿಯು ಇಂದಿನ ತೆಲಂಗಾಣ, ಮಹಾರಾಷ್ಟ್ರದ ಮರಾಠವಾಡ ಪ್ರದೇಶ, ಕರ್ನಾಟಕದ ರಾಯಚೂರು, ಕೊಪ್ಪಳ, ಯಾದಗಿರಿ, ಕಲುಬರಗಿ, ಬೀದರ್ ಸೇರಿತ್ತು. ಈ ಭಾಗದಲ್ಲಿ ನಿಜಾಮ್ ಸಂಸ್ಥಾನದ ರಜಾಕ್ ಸೇನೆ ಅನೇಕ ದೌರ್ಜನ್ಯವನ್ನು ಎಸಗಿದೆ. ಇದರಿಂದ ಈ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಭೀತಿ ಸೃಷ್ಠಿಸಿತ್ತು.

ಕಲಬುರಗಿ ಭಾಗದಲ್ಲಿ ಅನೇಕ ಹೋರಾಟಗಾರರು ನಿಜಾಮ್ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದರು. ಭಾರತ ಸರ್ಕಾರ ಒಕ್ಕೂಟ ಸೇರಲು ಒಪ್ಪದ ನಿಜಾಮ್ ಸರ್ಕಾರದ ವಿರುದ್ಧ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಬಾಯ್ ಪಟೇಲ್ ನೇತೃತ್ವದಲ್ಲಿ ಆಪರೇಷನ್ ಪೋಲೊ ಹೆಸರಿನ ಕಾರ್ಯಾಚರಣೆ ನಡೆಲಾಯಿತು. ನಂತರ ಭಾರತ ಸರ್ಕಾರದ ಮುಂದೆ ಶರಣಾದ ನಿಜಾಮ್ ಸಂಸ್ಥಾನದ ಸೇನಾ ಮುಖ್ಯಸ್ಥ ಎಲ್ ಉದ್ರುಜ್ ಜೆ, ಎನ್ ಶರಣಾಗತಿ ಘೋಷಣೆ ಮಾಡಿದ್ರು. ಸೆಪ್ಟೆಂಬರ್ 17, 1948ರಂದು ಭಾರತ ದೇಶದ ಒಕ್ಕೂಟದಲ್ಲಿ ಹೈದ್ರಾಬಾದ್ ಕರ್ನಾಟಕ ವಿಲೀನವಾಯಿತು. ಹೀಗಾಗಿ ಪ್ರತಿವರ್ಷ ಸೆಪ್ಟೆಂಬರ್ 17ರಂದು ವಿಮೋಚನಾ ದಿನವನ್ನು ಆಚರಣೆ ಮಾಡಲಾಗುತ್ತಿದೆ.

ಹೈದ್ರಾಬಾದ್ ಕರ್ನಾಟಕ ಪ್ರದೇಶ ಅನೇಕ ವರ್ಷಗಳಿಂದ ಹಿಂದುಳಿದ ಪ್ರದೇಶ ಎಂದು ಗುರುತಿಸ್ಪಟ್ಟಿತ್ತು. ಈ ಭಾಗದ ಅಭಿವೃದ್ಧಿ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸಿವೆ. ಸದ್ಯ ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮುರುನಾಮಕರಣ ಮಾಡಿ ಸರ್ಕಾರ ಆದೇಶ ಹೊಡಿಸಿದೆ. ಈ ಭಾಗದಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ.

ಪ್ರತಿ ವರ್ಷ ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಮೋಚನಾ ದಿನ ಎಂದು ಆಚರಣೆ ಮಾಡಲಾಗುತ್ತದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿ ಸೇರಿ ಶಾಲಾ, ಕಾಲೇಜಿನಲ್ಲಿ ಧ್ವಜಾರೋಹಣ ನಡೆಲಿದೆ. ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕಲಬುರ್ಗಿಯಲ್ಲಿ ಧ್ವಜಾರೋಹಣ ನಡೆಸಿ, ಸರ್ದಾರ್ ವಲ್ಲಬಾಯಿ ಪ್ರತಿಮೆ ಗೌರವ ಸಲ್ಲಿಸುವುದು ವಾಡಿಕೆಯಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!