ದೇಶ & ವಿದೇಶ

SBI ಬ್ಯಾಂಕ್ ಎಟಿಎಂ ಬಳಕೆದಾರರೇ ಗಮನಿಸಿ.. ಹೊಸ ನಿಯಮಗಳು ಜಾರಿಗಾಗಲಿವೆ.

ಎಟಿಎಂ ವಂಚನೆ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಹಣ ವಿತ್ ಡ್ರಾ ನಿಯಮದಲ್ಲಿ ಬದಲಾವಣೆ ಮಾಡಿದೆ. ಎಟಿಎಂಗಳಲ್ಲಿ 24×7 ಒನ್ ಟೈಮ್ ಪಾಸ್ವರ್ಡ್ ಆಧಾರಿತ ಎಟಿಎಂ ವಿತ್ ಡ್ರಾ ಸೌಲಭ್ಯವನ್ನು ಜಾರಿಗೆ ತರಲು ಎಸ್‌ಬಿಐ ನಿರ್ಧರಿಸಿದೆ. ಈ ಸೌಲಭ್ಯ ಸೆಪ್ಟೆಂಬರ್ 18 ರಿಂದ ದೇಶದ ಎಲ್ಲ ಎಸ್‌ಬಿಐ ಎಟಿಎಂಗಳಲ್ಲಿ ಅನ್ವಯವಾಗಲಿದೆ.

ರಾತ್ರಿಯ ಸಮಯದಲ್ಲಿ ಎಟಿಎಂ ವಂಚನೆಯನ್ನು ತಪ್ಪಿಸಲು ಎಸ್‌ಬಿಐ, ಜನವರಿ 1 ರಿಂದ ಒಟಿಪಿ ಆಧಾರಿತ ಎಟಿಎಂ ಹಣ ವಿತ್ ಡ್ರಾ ಸೌಲಭ್ಯವನ್ನು ಪರಿಚಯಿಸಿತ್ತು. ಇದರ ಪ್ರಕಾರ, ಎಸ್‌ಬಿಐ ಎಟಿಎಂನಿಂದ ರಾತ್ರಿ 8 ರಿಂದ ಬೆಳಿಗ್ಗೆ 8 ರವರೆಗೆ 10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಲು ಒಟಿಪಿ ಅಗತ್ಯವಿತ್ತು. ಇನ್ಮುಂದೆ ಇಡೀ ದಿನ ಎಟಿಎಂ ವಿತ್ ಡ್ರಾಗೆ ಒಟಿಪಿ ಅನಿವಾರ್ಯವಾಗಲಿದೆ.


ಈ ಸೌಲಭ್ಯವು ಎಸ್.ಬಿ.ಐ. ಎಟಿಎಂನಲ್ಲಿ ಮಾತ್ರ ಲಭ್ಯವಿರಲಿದೆ. ಎಟಿಎಂ ನಲ್ಲಿ ವಿತ್ ಡ್ರಾ ಹಣ ಟೈಪ್ ಮಾಡ್ತಿದ್ದಂತೆ ಸ್ಕ್ರೀನ್ ಮೇಲೆ ಒಟಿಪಿ ಕೇಳುತ್ತದೆ. ಮೊಬೈಲ್ ನಂಬರ್ ಗೆ ಬಂದ ಒಟಿಪಿ ಟೈಪ್ ಮಾಡಿದ ನಂತ್ರ ಹಣ ವಿತ್ ಡ್ರಾ ಮಾಡಬಹುದಾಗಿದೆ…

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!