ಸಿನಿ ದುನಿಯಾ
ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ಸ್ ಐಂದ್ರಿತಾ ಹಾಗೂ ದಿಗಂತಗೆ ಸಿಸಿಬಿ ಪೋಲಿಸರ ನೋಟಿಸ್….!

ಬೆಂಗಳೂರು :- ಸ್ಯಾಂಡಲವುಡ್ ಡ್ರಗ್ಸ್ ಕೇಸಗೆ ಸಂಬಂಧಿಸಿದಂತೆ ಇಂದು ಸಿಸಿಬಿ ಪೋಲಿಸರು ಮನಸಾರೆ ಖ್ಯಾತಿಯ ಐಂದ್ರಿತಾ ರೈ ಹಾಗೂ ದಿಗಂತಗೆ ಕಚೇರಿಗೆ ಹಾಜರಾಗಲು ಹೇಳಿದೆ.
ಪ್ರಸ್ತುತ ಡ್ರಗ್ಸ್ ಕೇಸನಲ್ಲಿ ಬಂಧಿತರಾವರ ಜೊತೆಗೆ ಇವರಿಬ್ಬರೂ ಗುರುತಿಸಿಕೊಂಡಿದ್ದಾರೆ ಎನ್ನುವ ಆರೋಪ ಇದೆ. ಮತ್ತು ಬಂಧಿತ ಆರೋಪಿ ಇವರ ಹೆಸರು ಉಲ್ಲೇಖಿಸಿರುವ ಸಾಧ್ಯತೆಯಿದೆ. ಅನೇಕ ಬಾರಿ ವೈಭವ್ ಜೈನ್ ಮತ್ತು ವಿರೇನ್ ಆಯೋಜಿತ ಪಾರ್ಟಿಯಲ್ಲಿಯೂ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಶ್ರೀಲಂಕಾ ಕ್ಯಾಸಿನೊ ಪಾರ್ಟಿಯಲ್ಲಿ ಶೇಖ ಪಾಸಿಲ್ ಮತ್ತು ಐಂದ್ರಿತಾ ಪರಸ್ಪರ ಆಮಂತ್ರಣ ಇತ್ತು ಎಂದು ಹೇಳಲಾಗುತ್ತಿದೆ. ಹುಡುಕಾಟ ನೆಡೆಸುತ್ತಿರುವ ಶೇಖ್ ಫಾಸಿಲ್ ಬಗ್ಗೆ ಐಂದ್ರಿತಾಗೆ ಮಾಹಿತಿ ಇರೋ ಹಿನ್ನಲೆಯಲ್ಲಿ ನೋಟಿಸ್ ನಿಡಲಾಗಿದೆ ಎನ್ನಲಾಗಿದೆ.