ಕರ್ನಾಟಕಸಿನಿ ದುನಿಯಾ

ಕನ್ನಡವೇ ನಮ್ಮ ಉಸಿರು ಕನ್ನಡವೇ ನಮ್ಮಗೆ ರಾಪ್ಟ್ರಭಾಷೆ : ನಟ ದರ್ಶನ ತೂಗುದೀಪ….


ಬೆಂಗಳೂರು :- ಹೌದು ಕರ್ನಾಟಕದ ತುಂಬೆಲ್ಲಾ ಪ್ರಸ್ತುತವಾಗಿ ಚರ್ಚೆಯಲ್ಲಿರುವ ಹಿಂದಿ ಹೇರಿಕೆಯ ವಿಷಯವಾಗಿ ಕನ್ನಡಿಗರ ಪರ ನಿಂತಿರುವ ಡಿ.ಬಾಸ್ ದರ್ಶನ ಕನ್ನಡವೇ ನಮ್ಮ ಉಸಿರು ಎಂದು ಟ್ವೀಟ್ ಮಾಡುವ ಮೂಲಕ ಕನ್ನಡಪರ‌ ನಿಲ್ಲುವು ವ್ಯಕ್ತ ಪಡಿಸಿದ್ದಾರೆ.

ಬಹಳ ವರ್ಷಗಳಿಂದಲೂ ಈ ಹಿಂದಿ ಹೇರಿಕೆ ಕಾಲ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದ ಬಾರ್ಡರ್ ಪ್ರದೇಶಗಳಲ್ಲಿ ಅನ್ಯ ಭಾಷೆಗಳ‌ ಬಳಕೆಯಿಂದ ನಮ್ಮ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತದೆ. ಇದನ್ನು ಪ್ರಟಿಭಟಿಸದೇ ನಾವು ಸುಮ್ಮನಿದ್ದರೆ ಮುಂದೆ ಕನ್ನಡಿಗ ಎನ್ನುವ ಅಸ್ತಿತ್ವವೇ ದೂರವಾಗುವ ದಿನಗಳು ಹತ್ತಿರದಲ್ಲೇ ಇದೆ.

ಹೀಗೆ ಸುಧೀರ್ಘವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿರುವ ನಟ ದರ್ಶನರವರು ಕನ್ನಡವೇ ನಮ್ಮ ರಾಷ್ಟ್ರ ಭಾಷೆ, ಉತ್ತರದ ಯಾವುದೊ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕ್ರತಿ, ಭಾಷೆ ಮತ್ತೆ ನೆಲೆಯನ್ನು ಕಿತ್ತುಕೊಳ್ಳುವ ಸಂಗತಿ ಮತ್ತು ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತ್ತೇವೆ ಎಂದು ಕನ್ನಡ ಪ್ರೇಮವನ್ನು ಮೆರೆದಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!