ದೇಶ & ವಿದೇಶ

ಅಧಿವೇಶನ ತಯಾರಿ 17 ಸಂಸದರಿಗೆ ಕೊರೊನಾ ಪಾಸಿಟಿವ್..!

ಹೊಸದಿಲ್ಲಿ: ಸೋಮವಾರ ಬೆಳಗ್ಗೆ ಮುಂಗಾರು ಅಧಿವೇಶನ ಆರಂಭವಾಗುವ ಮೊದಲು ನಡೆಸಲಾಗಿರುವ ಕಡ್ಡಾಯ ಕೋವಿಡ್-19 ಪರೀಕ್ಷೆಯಲ್ಲಿ 17 ಮಂದಿ ಸಂಸತ್ ಸದಸ್ಯರುಗಳಿಗೆ ಕೊರೊನ ವೈರಸ್ ಇರುವುದು ದೃಢಪಟ್ಟಿದೆ.

ಸೆಪ್ಟಂಬರ್ 13 ಹಾಗೂ 14ರಂದು ಪಾರ್ಲಿಮೆಂಟ್ ಹೌಸ್‌ನಲ್ಲಿ ಲೋಕಸಭಾ ಸದಸ್ಯರುಗಳಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ. ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಮತ್ತು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ, ಸೇರಿದಂತೆ ಕೊರೋನ ಸೋಂಕಿತ ಎಂಪಿಗಳ ಪೈಕಿ ಬಿಜೆಪಿ ಪಕ್ಷದವರೇ 12 ಮಂದಿ ಇದ್ದರು.

ಉಳಿದಂತೆ ವೈಆರ್‌ಎಸ್ ಕಾಂಗ್ರೆಸ್‌ನ ಇಬ್ಬರು, ಶಿವಸೇನೆ, ಡಿಎಂಕೆ ಹಾಗೂ ಆರ್‌ಎಲ್‌ಪಿ ಪಕ್ಷಗಳ ತಲಾ ಒಬ್ಬರು ಸಂಸದರಿದ್ದಾರೆ. ಕೋವಿಡ್ ಪಾಸಿಟಿವ್ ಬಂದಿರೋ ಕೇಂದ್ರ ಸಚಿವರು ಹಾಗೂ ಸಂಸದರಿಗೆ ಐಸೋಲೇಷನ್ ಮಾಡಲಾಗಿದೆ. ಸಂಪರ್ಕಿತರಿಗೆ ಕ್ವಾರಂಟೈನ್ ಆಗಲು ಸೂಚನೆ ನೀಡಲಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!