ಕರ್ನಾಟಕಕ್ರೈಂ

ವೀಲಿಂಗ್ ಗುಂಪಿನಿಂದ ಬುದ್ದಿ ಹೇಳಿದ ಯುವಕನ ಬರ್ಬರ ಹತ್ಯೆ..


ಮೈಸೂರು :- ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಕೇತುಪುರ ಗ್ರಾಮದ ಸಿದ್ದರಾಜು (26) ಹತ್ಯೆಯಾದ ಯುವಕ. ಗ್ರಾಮದಲ್ಲಿ ವೀಲಿಂಗ್ ಮಾಡುತ್ತಿದ್ದ ಯುವಕರಿಗೆ ರಸ್ತೆ ಚಿಕ್ಕದಾಗಿದೆ ಮಕ್ಕಳು, ವೃದ್ದರು ಓಡಾಡುತ್ತಿರುತ್ತಾರೆ. ವೀಲಿಂಗ್ ಮಾಡದಂತೆ ಬುದ್ದಿ ಹೇಳಿದ್ದೇ ತಪ್ಪಾಯ್ತು ಅನಿಸುತ್ತೆ. ಎರಡು ದಿನಗಳ ಹಿಂದೆ ಗಲಾಟೆ ನಡೆದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು‌.

ಬುದ್ದಿ ಹೇಳಿ, ದೂರು ದಾಖಲಾಗಿದ್ದ ಹಿನ್ನಲೆ ನಿನ್ನೆ ರಾತ್ರಿ ಗುಂಪುಗಟ್ಟಿಗೊಂಡು ಬಂದು ಏಕಾಏಕಿ ದಾಳಿ ನೆಡೆಸಿದ ಯುವಕರ ಗುಂಪು, ಕಣ್ಣಿಗೆ ಕಾರದಪುಡಿ ಎರಚಿ ಮಚ್ಚಿನಿಂದ ಸಿದ್ದರಾಜುವಿನ‌‌‌ ಮೇಲೆ ಹಲ್ಲೆ ಮಾಡಿದೆ. ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿದ್ದರಾಜು ಸ್ಥಳದಲ್ಲಿ ಮೃತರಾದರು.

ಗಲಾಟೆ ತಡೆಯಲು ಹೋದ ಮೃತ ಸಿದ್ದರಾಜು ಚಿಕ್ಕಪ್ಪನ ಮೇಲು ಗುಂಪು ಹಲ್ಲೆ ಮಾಡಿದೆ. ಘಟನೆಯ ನಂತರ ಪರಾರಿಯಾಗಿರೋ ಯುವಕರ ಗುಂಪಿನ ಪತ್ತೆಗಾಗಿ ಪೋಲಿಸರು ಬಲೆ ಬೀಸಿದ್ದಾರೆ. ಇನ್ನೂ ಬನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!