ದೇಶ & ವಿದೇಶ
ಜಾರಿಗಾಗಲಿದೇಯಾ ದೇಶದಲ್ಲಿ ಮತ್ತೊಮ್ಮೆ ಲಾಕ್ಡೌನ್?

ನವದೆಹಲಿ : ಕೊರೊನಾ ವೈರಸ್ ಹಾವಳಿ ದೇಶದಲ್ಲಿ ದಿನದಿಂದ ದಿನಕ್ಕೆ ಆತಂಕ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್ ಡೌನ್ ಜಾರಿಯಾಗಲಿದೆಯೇ ಎಂಬ ಆತಂಕ ಮನೆ ಮಾಡುತ್ತಿದೆ.
ಈ ಕುರಿತು ಮೌನ ಮುರಿದ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನೇರಂದ್ರ ಮೋದಿ ಅವರು, ದೇಶದಲ್ಲಿ ಕೊರೊನಾ ಇನ್ನೂ ಹೋಗಿಲ್ಲ. ಅಲ್ಲದೇ, ಅದಕ್ಕೆ ಇನ್ನೂ ಲಸಿಕೆ ಕಂಡು ಹಿಡಿದಿಲ್ಲ. ಹೀಗಾಗಿ ಯಾರೂ ಎಚ್ಚರ ತಪ್ಪಬಾರದು. ಕೊರೊನಾ ಲಸಿಕೆ ಸಿಗುವವರೆಗೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ. ಎಲ್ಲಿಯವರೆಗೆ ಲಸಿಕೆ ಇಲ್ಲವೋ ಅಲ್ಲಿಯವರೆಗೆ ಸಡಿಲಿಕೆ ಇಲ್ಲ ಎಂದು ಹೇಳಿದ್ದಾರೆ. ಮತ್ತೊಂದರಲ್ಲಿ ದೋ ಗಜ್ ಕಿ ದೂರಿ, ಮಾಸ್ಕ್ ಹೈ ಜರೂರಿ ಎಂದು ಹೇಳಿದ್ದಾರೆ.