ಕರ್ನಾಟಕಜಿಲ್ಲಾ

ಸಚಿವ ರಮೇಶ ಜಾರಕಿಹೊಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್..?


ಬೆಳಗಾವಿ :- ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಗಾಗ ಸುದ್ದಿಯಲ್ಲಿತ್ತಾರೆ. ಮತ್ತೆ ಈಗ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಯೊಂದು ವೈರಲ್‌ ಆಗಿದೆ. ಎಂ.ಎಲ್.ಎ ಆದ ಮೇಲೆ ಸಂಘರ್ಷಗಳು ಹೆಚ್ಚಾಗಿವೆ, ಹೆಣ್ಣುಮಗಳಿಗೆ ಎಲ್ಲಾ ಕಷ್ಟಗಳು ಒಮ್ಮೆಲೆ ಬಂದಿವೆ. 5 ಲಕ್ಷ ಹಣ ಮಂಜೂರು ಮಾಡಲು ಸಹ ಕಷ್ಟ ಕೊಡುತ್ತಿದ್ದಾರೆ. ನಿಮ್ಮಗೆಲ್ಲ ಗೊತ್ತು ನನಗೆ ಯಾರು ಕಷ್ಟ ಕೊಡ್ತಿದ್ದಾರೆ ಅಂತ ಎಂದು ಹೇಳಿದ್ದಾರೆ.

ಪರೋಕ್ಷವಾಗಿ ಟಾಂಗ್ ನೀಡಿದ ಶಾಸಕಿ…?
ಇಡೀ ಕ್ಷೇತ್ರದ ಸುಧಾರಣೆಯ ಪಣ ತೊಟ್ಟಿದ್ದೇನೆ, ಪ್ರತಿ ಹಂತದಲ್ಲಿಯೂ ಸಂಘರ್ಷ ಎದುರಾಗುತ್ತಿದೆ. ಒಳ್ಳೆಯ ಕೆಲಸ ಮಾಡಿದ್ರೆ ನನ್ನ ಹೆಸರು ಬರುತ್ತೆ ಅಂತ ಕಷ್ಟ ನೀಡುತ್ತಿದ್ದಾರೆ. ಅವರದೇ ಸರ್ಕಾರ, ಅವರದೇ ಮಂತ್ರಿಗಳ ನಡುವೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ ಎಂದು ಪರೋಕ್ಷವಾಗಿ ಸಚಿವ ರಮೇಶ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ ಶಾಸಕಿ ಹೆಬ್ಬಾಳ್ಕರ್. ಬೆಳಗಾವಿ ತಾಲೂಕಿನ ಸೂಳೇಭಾವಿಯಲ್ಲಿ ನೆಡೆದ ಶಾಲಾ‌ ಕೊಠಡಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಚಿವ ರಮೇಶ ಹೇಗೆ ಪ್ರತಿಕ್ರಿಯೆ ಕೊಡ್ತಾರೆ ಅಂತ ಕಾದು ನೋಡಬೇಕು.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!