ಕರ್ನಾಟಕಜಿಲ್ಲಾ

ಬೆಂಗಳೂರು To ಕಲಬುರಗಿ ಗಾಂಜಾ ಲಿಂಕ್!


ಕಲಬುರ್ಗಿ :- ರಾಜ್ಯದಲ್ಲಿ ಗಾಂಜಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿವೆ. ಇಡೀ ಕಲಬುರ್ಗಿ ಜನತೆಯೇ ಬೆಚ್ಚಿ ಬೀಳಿಸುವ ಪ್ರಕರಣವೊಂದು ನೆಡೆದಿದೆ. ಕಾಳಗಿ ಪಟ್ಟಣ ಸಮೀಪದ‌ ಲಕ್ಷ್ಮಣನಾಯಕ್ ತಾಂಡಾದ ಕುರಿದೊಡ್ಡಿಯಲ್ಲಿ ಅಡಗಿಸಿಡಲಾಗಿದ್ದ ಭಾರೀ ಪ್ರಮಾಣದ ಗಾಂಜಾ‌ ಪತ್ತೆಯಾಗಿದೆ.‌ ಸುಮಾರು 6 ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ..?

ಬೆಂಗಳೂರಿನಲ್ಲಿ ಬಂಧಿಸಿದ್ದ ಸಿದ್ದನಾಥ ನೀಡಿದ್ದ ಖಚಿತ ಮಾಹಿತಿಯನ್ನಾಧರಿಸಿ ದಾಳಿ ನೆಡೆಸಿದಾಗ 1200 ಕೆ.ಜಿ ಗಾಂಜಾ ಪತ್ತೆಯಾಗಿದೆ. ಚಂದ್ರಕಾಂತ ಚವ್ಹಾಣ ಎಂಬುವರಿಗೆ ಸೇರಿದ ಕುರಿದೊಡ್ಡಿಯಲ್ಲಿ ಓರಿಸ್ಸಾದಿಂದ ಗಾಂಜಾ ತರಲಾಗಿತ್ತು. ಅಷ್ಟೇ ಅಲ್ಲದೇ ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳಿಂದ ಗಾಂಜಾ ಆಮದು ಮಾಡಿಕೊಳ್ಳಲಾಗುತ್ತಿತು ಎಂಬ ಮಾಹಿತಿ ದೊರೆತಿದೆ.

ಇಲ್ಲಿಂದಲೇ ರಾಜ್ಯದ ಮೂಲೆ ಮೂಲೆಗಳಿಗೆ ಗಾಂಜಾ ಪೂರೈಕೆ ಮಾಡಲಾಗುತ್ತಿದೆ.‌ ನಾಗನಾಥ್ ಮತ್ತು ಚಂದ್ರಕಾಂತ್ ಎಂಬ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಇನ್ನೂ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದ ಶೇಷಾದ್ರಿಪುರಂ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸುತ್ತಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!