ಕ್ರೈಂ
ಪಬ್ ಜೀ ಗೇಮ್ ಆಡಬೇಡ ಎಂದ ಪಾಲಕರು, ಮನನೊಂದು ಯುವಕ ಆತ್ಮಹತ್ಯೆ..

ಹಾವೇರಿ :- ಹೌದು ಪಬ್ ಜೀ ಗೇಮ್ ಆಟಬೇಡ ಎಂದ ಪಾಲಕರ ಬುದ್ದಿ ಮಾತಿಗೆ ತೇಜಸ್ ಶಿಡ್ಲಾಪೂರ (17) ಎಂಬ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನನ್ನು ಹಾವೇರಿ ತಾಲೂಕಿನ ಸಂಗೂರ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
ಪಬ್ ಜೀ ಗೇಮ್ ಆಡಬೇಡ ಎಂದು ಬುದ್ದಿ ಹೇಳಿ ಮೊಬೈಲ್ ಪೋನಗೆ ಇಂಟರ್ನೆಟ್ ಹಾಕಿಸುವುದನ್ನು ಬಿಟ್ಟಿದ್ದಾರೆ. ಇದರಿಂದ ಮನನೊಂದು ತೋಟದ ಮನೆಗೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.