ಕ್ರೈಂದೇಶ & ವಿದೇಶ

ಟಿಕಟಾಕ್ ಗೆಳಯನ ಕಿರುಕುಳಕ್ಕೆ ಕಿರುತರೆ ನಟಿ ಆತ್ಮಹತ್ಯೆ..

ಹೈದರಾಬಾದ್:- ತೆಲುಗಿನ ಕಿರುತೆರೆ ನಟಿಗೆ ಟಿಕಟಾಕ್ ಗೆಳಯನಿಂದ ಆಗುವ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಹೈದರಾಬಾದ್‌ನ ಮಧುರನಗರದ ನಿವಾಸಿ ನಟಿ ಶ್ರಾವಣಿ ಕೊಂಡಪಲ್ಲಿ ಅವರ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಏತನ್ಮಧ್ಯೆ, ಗೆಳೆಯ ದೇವರಾಜ್ ರೆಡ್ಡಿ ಕಿರುಕುಳ ನೀಡುವುದರಿಂದ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಶ್ರಾವಣಿಯ ಕುಟುಂಬ ಆರೋಪಿಸಿದೆ.

ಸದ್ಯ ದೇವರಾಜ್ ವಿರುದ್ಧ ಎಸ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.

ಶ್ರಾವಣಿ ಕಳೆದ 8 ವರ್ಷಗಳಿಂದ ತೆಲುಗು ಟಿವಿ ಉದ್ಯಮದಲ್ಲಿ ಸಕ್ರಿಯರಾಗಿದ್ದರು. ಜನಪ್ರಿಯ ತೆಲುಗು ಧಾರಾವಾಹಿಗಳಾದ ಮನಸು ಮಮಥಾ ಮತ್ತು ಮೌನರಾಗಂನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು.ನಟಿಯ ಅಕಾಲಿಕ ಮರಣದಿಂದ ಕಿರುತೆರೆಗೆ ಆಘಾತವುಂಟಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!