ಕರ್ನಾಟಕಸಿನಿ ದುನಿಯಾ

ಹುಟ್ಟುಹಬ್ಬದಂದೇ ಅಸುನೀಗಿದ ಕನ್ನಡದ ಹಿರಿಯ ನಟ…

ಬೆಂಗಳೂರು: ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹುಬ್ಬಳ್ಳಿ ಮೂಲದ ಹಿರಿಯ ನಟ ಸಿದ್ದರಾಜ್ ಕಲ್ಯಾಣಕರ್ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ನಿನ್ನೆಯಷ್ಟೇ ತಮ್ಮ 60ನೇ ಜನ್ಮದಿನವನ್ನು ಪ್ರೇಮಲೋಕ ಸೀರಿಯಲ್ ಸೆಟ್‌ನಲ್ಲಿ ಆಚರಿಸಿಕೊಂಡಿದ್ದ ಅವರು, ರಾತ್ರಿಯವರೆಗೂ ಆರಾಮಾಗಿಯೇ ಇದ್ದರು. ರಾತ್ರಿ ತಮ್ಮ ಜನ್ಮದಿನ ಸಂಭ್ರಮದ ಫೋಟೋ ಸಹ ಫೇಸ್‌ಬುಕ್​ಗೆ ಅಪಲೋಡ್ ಮಾಡಿದ್ದರು. ಆದರೆ ತಡರಾತ್ರಿ ಹೃದಯಾಘಾತದಿಂದ ಅಸುನೀಗಿದ್ದಾರೆ.

ಯಾರೇ ನೀ ಅಭಿಮಾನಿ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ನಟ ಶ್ರೀ ಮಂಜುನಾಥ, ಸೂಪರ್ ಸೇರಿದಂತೆ 70 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಪ್ರೇಮಲೋಕ ಹಾಗೂ ಗಿಣಿರಾಮ ಚಿತ್ರಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಹುಬ್ಬಳ್ಳಿ ನವನಗರದ ನಿವಾಸಿಯಾಗಿರುವ ಇವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!