ಭಾರತದಲ್ಲಿ ಪಬ್ ಜೀ ನಿಷೇಧ ಮನನೊಂದು ಯುವಕ ನೇಣಿಗೆ ಶರಣು..

ಕೋಲ್ಕತ್ತಾ :- ಹೌದು, ಪಬ್ ಜೀ ಭಾರತದಲ್ಲಿ ನಿಷೇಧವಾದ ಸುದ್ದಿ ಎಲ್ಲಡೆ ಹರಿದಾಡುತ್ತಿದ್ದು ಯುವ ಸಮೂಹದಕ್ಕೆ ಅತೀವ ಬೇಸರವಾಗಿದೆ. ಇದಕ್ಕೆ ಹಲವಾರು ಕಡೆಗಳಲ್ಲಿ ಉದಾಹರಣೆಗಳು ದೊರೆತಿವೆ. ಆದರೆ ಆಘಾತಕಾರಿ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನೆಡೆದಿದೆ.
ನಾದಿಯಾ ಜಿಲ್ಲೆಗೆ ಸೇರಿದ ಪ್ರೀತಮ್ (21) ಎಂಬ ಐಟಿಐ ವಿದ್ಯಾರ್ಥಿಯು ನೇಣಿಗೆ ಶರಣಾಗಿದ್ದು, ಇದಕ್ಕೆ ಕಾರಣ ಪಬ್ ಜೀ ಬ್ಯಾನ್ ಎಂದು ತಿಳಿದು ಬಂದಿದೆ. ಈ ಕುರಿತಾಗಿ ಚಕ್ ದಹಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಮ್ ಎಂದಿನಂತೆ ಬೆಳಿಗ್ಗೆ ಉಪಹಾರ ಮುಗಿಸಿ ಆತನ ಕೊಠಡಿ ಸೇರಿದ್ದು, ನಂತರ ಎಷ್ಟೇ ಬಾಗಿಲು ಬಡಿದರೂ ತೆರೆದಿಲ್ಲ, ಬಾಗಿಲು ಒಡೆದು ಕೊಠಡಿ ಪ್ರವೇಶಿಸಿದಾಗ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡಿರುವದನ್ನು ಕಂಡು ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಇಡೀ ರಾತ್ರೀ ಪಬ್ ಜೀ ಗೇಮ್ ನಲ್ಲಿ ಕಾಲ ಕಳೆಯುತ್ತಿದ್ದ ಪ್ರೀತಮ್ ಆಪ್ ಬ್ಯಾನನಿಂದ ಹತಾಶೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಹಿತಿಗಳು ತಿಳಿಸಿವೆ.
ಪಬ್ ಜೀ, ಪಬ್ ಜೀ ಲೈಟ್ ಸೇರಿದಂತೆ 118 ಆ್ಯಪ್ ಗಳನ್ನು ಕೇಂದ್ರ ಸರಕಾರ ಇತ್ತೀಚೆಗೆ ನಿಷೇಧಿಸಿತ್ತು.