ಸಿನಿ ದುನಿಯಾ
Zee tvಯ ಮಹಾನಾಯಕ ಧಾರಾವಾಹಿ ನಿಲ್ಲಿಸಲು ಒತ್ತಡ- ಹುಣಸೂರಗೆ ಮಿಡ್ ನೈಟ್ ಕಾಲ್, ಮೆಸೆಜ್!

ಬೆಂಗಳೂರು- ಮಹಾನಾಯಕ ಎಂಬ ಶೀರ್ಷಿಕೆಯಡಿಯಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರರವರ ಜೀವನ ಚರಿತ್ರೆಯನ್ನು ಯುವ ಪೀಳಿಗೆಗೆ ತೋರಿಸುವ ವಿನೂತನ ಪ್ರಯತ್ನವನ್ನು ಜೀ ಟಿವಿ ಕನ್ನಡ ಮಾಡಿತ್ತು. ಅದು ಅತ್ಯಂತ ಯಶಸ್ವಿಯಾಗಿ ಪ್ರಸಾರಗೊಳ್ಳುತ್ತಿದೆ. ಮತ್ತು ಹೆಚ್ಚಿನ ಟಿ.ಆರ್.ಪಿ ಪಡೆದು ಕರ್ನಾಟಕದಲ್ಲಿ ಪ್ರಸಿಧ್ದಿಯೊಂದಿಗೆ ಮುನ್ನುಗ್ಗುತ್ತಿದೆ.
ವಾಹಿನಿ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರಿಗೆ ಧಾರವಾಹಿಯನ್ನು ನಿಲ್ಲಿಸುವಂತೆ ಒತ್ತಡಗಳು ಬರುತ್ತಿವೆ ಎಂಬ ಆತಂಕಕಾರಿ ವಿಷಯವನ್ನು ಸ್ವತಃ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸುದ್ದಾರೆ. ಮಿಡ್ ನೈಟ್ ಕಾಲ್ಸ್ ಹಾಗೂ ಮೆಸೇಜ್ ಗಳ ಮೂಲಕ ಧಾರಾವಾಹಿ ನಿಲ್ಲಿಸುವಂತೆ ಒತ್ತಡ ಬರುತ್ತಿವೆ.
ಆದರೆ ಯಾವುದೇ ಕಾರಣಕ್ಕೂ ಧಾರಾವಾಹಿಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಸ್ವತಃ ರಾಘವೇಂದ್ರ ಹುಣಸೂರು ಹೇಳಿಕೊಂಡಿದ್ದಾರೆ.