ಕ್ರೈಂಜಿಲ್ಲಾ

ಮೈಸೂರಿನಲ್ಲಿ ಬೆಲ್ ಬಾಟಮ್ ಸಿನಿಮಾ‌ ಮಾದರಿಯಲ್ಲಿ ಕಳ್ಳತನ.

ಮೈಸೂರು:- ಮೈಸೂರಿನ ಸರಸ್ವತಿಪುರಂನಲ್ಲಿರುವ 5 ನೇ ಮುಖ್ಯ ರಸ್ತೆಯಲ್ಲಿರುವ ವಿಜಿಕುಮಾರ ಹಾಗೂ ವನಜಾಕ್ಷಿ ಎಂಬುವರ ದಂಪತಿ ಮನೆಯಲ್ಲಿ ವಿಚಿತ್ರ ರೀತಿಯಲ್ಲಿ ಕಳ್ಳತನ ನೆಡೆದಿದೆ. ಬೀಗ ಹೊಡೆದಿಲ್ಲ, ಬಾಗಿಲು,ಕಿಟಕಿ ಮುರಿದಿಲ್ಲ.
ಆದರು ಮನೆಯಲ್ಲಿದ್ದ ಎರಡು ಕೆ.ಜಿ.ಚಿನ್ನ ಕಳ್ಳತನವಾಗಿದೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಕಳ್ಳತನದ ವೇಳೆಯಲ್ಲಿ ಬಾಲಕಿ ಮನೆಯಲ್ಲಿಯೇ ಇದ್ದಳು. ಒಂದೇ ಒಂದು ಸಣ್ಣ ಕುರುಹು ಇಲ್ಲದೆ ಕಳ್ಳರು ಚಿನ್ನ ಕದ್ದಿದ್ದಾರೆ.
ಮಧ್ಯ ರಾತ್ರಿ ಮೂರು ಗಂಟೆ ವೇಳೆಯಲ್ಲಿ ಕಳ್ಳತನ ನೆಡೆದಿದೆ ಎಂದು ತಿಳಿದು ಬಂದಿದೆ. ಬ್ಯಾಂಕನಲ್ಲಿದ್ದ ಚಿನ್ನವನ್ನು
ಬ್ಯಾಂಕ್ ಬೇರೆಡೆ ಸ್ಥಳಾಂತರ ಮಾಡಿದ್ದರಿಂದ ಮನೆಗೆ ತಂದಿದ್ದರು.ಜೊತೆಗೆ ನಮ್ಮ ಮಾವನ ಮನೆ ರಿಪೇರಿ ಹಿನ್ನೆಲೆ ಅವರ ಅರ್ಧ ಕೆ.ಜಿ. ಚಿನ್ನ ಕೂಡ ತಮ್ಮ ಮನೆಯಲ್ಲಿ ಇಟ್ಟಿದ್ದೇವು.

ಇನ್ನೂ ನನಗೆ ಕೊರೊನಾ ಪಾಸಿಟಿವ್ ಬಂತು, ನಾನು ಸರಿಯಾಗುವಷ್ಟರಲ್ಲೆ ನಮ್ಮ ತಾಯಿ ಕೂಡ ಪಾಸಿಟಿವ್ ಆಗಿದ್ದರು. ಈ ಗೊಂದಲದಿಂದ ನಾನು ಚಿನ್ನವನ್ನು ಬ್ಯಾಂಕ್ ನಲ್ಲಿ‌ ಇಡಲು ಸಾಧ್ಯವಾಗಲಿಲ್ಲ. ಈ ಗೊಂದಲದಲ್ಲೆ ಇದ್ದೆ. ಕಳೆದ ರಾತ್ರಿ ಕೂಡ ತಾಯಿಗೆ ಆರೋಗ್ಯ ಸರಿ ಇಲ್ಲದ ಕಾರಣ ನಾನು ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡೋಗಿದ್ದೆ. ಕಳ್ಳತನವಾದ ಮನೆ ಮಾಲೀಕ ವಿಜಯ್ ಕುಮಾರ್ ಹೇಳಿದರು.

ಈ ಕಳ್ಳರ ಕೈಚಳಕವನ್ನು ನೋಡಿದರೆ ಕನ್ನಡ ಚಲನಚಿತ್ರ ಬೆಲ್ ಬಾಟಮ್ ಸಿನಿಮಾ ನೆನೆಪಿಗೆ ಬರುತ್ತದೆ. ಏನೇ ಇರಲಿ 2 ಕೆ.ಜಿ ಚಿನ್ನ ಎಂದರೆ ಸಾಮಾನ್ಯನೇ.? ಇನ್ನೂ ಸ್ಥಳಕ್ಕೆ ಸರಸ್ವತಿಪುರಂ ಪೊಲೀಸ್ ಠಾಣಾಧಿಕಾರಿ ವಿಜಯಕುಮಾರ್ ಹಾಗೂ ಭವ್ಯ ಭೇಟಿ‌ ನೀಡಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಸಹಾಯದಿಂದ ತನಿಖೆ ಪರಿಶೀಲನೆ ನೆಡೆಸಿದ್ದಾರೆ. ಈ ಕುರಿತಾಗಿ ಸರಸ್ವತಿಪುರಂ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!