ಕರ್ನಾಟಕ

ಕೆಪಿಸಿಸಿ ಕಚೇರಿಗೆ ಅರಮನೆ ಟಚ್.‌ವಾಸ್ತು ಮೇಲೆ ನಂಬಿಕೆಯಿಟ್ರಾ ಡಿಕೆಶಿ..?


ಬೆಂಗಳೂರು :- ಮುಂದಿನ ಎರಡು ವರ್ಷಗಳಲ್ಲಿ ಚುನಾವಣೆಯ ಸಿದ್ದತೆಯನ್ನು ಕಾಂಗ್ರೆಸ್‌ ಪಕ್ಷ ಕಿಂಗ್ ಮೇಕರ ಡಿಕೆಶಿ ನೆಡೆಸಿದ್ದಾರೆ.‌ ದೈವ ಭಕ್ತರು ಹಾಗೂ ಜ್ಯೋತಿಷ್ಯದಲ್ಲಿ ನಂಬಿಕೆಯನ್ನು ಹೊಂದಿರುವ ಡಿ.ಕೆ‌.‌ಶಿವಕುಮಾರ
ಸಿಎಂ ಪಟ್ಟಕ್ಕಾಗಿ ವಾಸ್ತು ಮೋರೆ ಹೋದ್ರಾ..? ಎಂಬ ಪ್ರಶ್ನೆಯು ಕೇಳಿಬರುತ್ತಿದೆ.‌

ಕೆಪಿಸಿಸಿ ಪಧಗ್ರಹಣ ಸಂದರ್ಭದಲ್ಲಿ ಹೋಮ-ಹವನವನ್ನು ನೆಡೆಸಿದರು. ಇದಕ್ಕೆ ಪುಷ್ಠಿ ನೀಡುವಂತೆ ಬೆಂಗಳೂರಿನ ವಸಂತ ನಗರದ‌ ‌ಕೆಪಿಸಿಸಿ ಕಚೇರಿಯನ್ನು ಮರುವಿನ್ಯಾಸ ಮಾಡಲಾಗುತ್ತಿದೆ. ಜ್ಯೋತಿಷಿಗಳ‌ ಸಲಹೆಯಂತೆ ಬದಲಾವಣೆ ಮಾಡಲಾಗುತ್ತಿದೆ. ಕಚೇರಿಯ ಗೋಡೆ, ಬಾಗಿಲು ಮತ್ತು ಕಂಬಗಳನ್ನು ಬದಲಿಸಲಾಗುತ್ತಿದೆ. ಅರಮನೆಯಲ್ಲಿರುವಂತಹ ಕಂಬಗಳಿದ್ದರೇ ಸಿಎಂ ಪಟ್ಟ ಖಚಿತ ಎಂಬ ಜ್ಯೋತಿಷಿ ಸಲಹೆಯಂತೆ ಕಂಬಗಳನ್ನು ಮತ್ತು ಕುಬೇರ ಮೂಲೆಯಲ್ಲಿ ಬಾಗಿಲನ್ನು ಸ್ಥಳಾಂತರ ಮಾಡಲಾಗಿದೆ.

ಇವರಂತೆ ಅನೇಕ ರಾಜಕಾರಣಿಗಳು ಹೋರಾಟಗಳು ಮತ್ತು ದೈವ ಬಲದಿಂದ‌ ಪಟ್ಟಕ್ಕೇರಿರುವ ಉದಾಹರಣೆಗಳನ್ನು ಕಾಣಬಹುದಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!